ಬೆಂಗಳೂರು, ಎ.14 (Daijiworld News/MB) : ರಾಜ್ಯದಲ್ಲಿ ಕೊರೊನಾಗೆ ಬಲಿಯಾಗುತ್ತಲ್ಲೇ ಇದ್ದು 24 ಗಂಟೆಗಳಲ್ಲಿ ಮೂರು ಮಂದಿ ಸಾವನ್ನಪ್ಪಿದ್ದಾರೆ. ಇದರಿಂದಾಗಿ ರಾಜ್ಯದಲ್ಲಿ ಈ ಸೋಂಕಿನಿಂದಾಗಿ ಮೃತಪಟ್ಟವರ ಸಂಖ್ಯೆ 9 ಕ್ಕೆ ಏರಿಕೆಯಾಗಿದೆ.
ಇನ್ನು ರಾಜ್ಯದಲ್ಲಿ ಕಳೆದ 24 ಗಂಟೆಗಳಲ್ಲಿ ಹೊಸ 11 ಹೊಸ ಪ್ರಕರಣಗಳು 11 ಹೊಸ ಪ್ರಕರಣಗಳು ಪತ್ತೆಯಾಗಿದ್ದು ಸೋಂಕಿತರ ಒಟ್ಟು 258 ಜನರಿಗೆ ಸೋಂಕು ತಗಲಿದೆ.
ಕಲಬುರಗಿಯ 55 ವರ್ಷದ ವೃದ್ಧ, ಬೆಂಗಳೂರು ನಗರದ 65 ವರ್ಷದ ವೃದ್ಧ, ವಿಜಯಪುರದ 69 ವರ್ಷದ ವೃದ್ಧ ಸೋಂಕಿಗೆ ಬಲಿಯಾಗಿದ್ದು ಕಲಬುರಗಿಯ 10 ವರ್ಷದ ಬಾಲಕಿ, 51ವರ್ಷದ ವೃದ್ಧ, 35 ವರ್ಷದ ಮಹಿಳೆ, ಹಿಂದುಪುರದಿಂದ ದ್ವಿಚಕ್ರವಾಹನದಲ್ಲಿ ಪ್ರಯಾಣ ಮಾಡಿದ ಬೆಂಗಳೂರಿನ 26 ವರ್ಷದ ವ್ಯಕ್ತಿ, ಬಾಗಲಕೋಟೆಯ 43 ವರ್ಷದ ಪುರುಷ ಮತ್ತು 32 ವರ್ಷದ ಮಹಿಳೆ, ಬೆಂಗಳೂರು ನಗರದ 65 ವರ್ಷದ ವೃದ್ಧ, ಚಿಕ್ಕಬಳ್ಳಾಪುರದ 65 ವರ್ಷದ ವೃದ್ಧ, ಬಾಗಲಕೋಟೆಯ 39 ವರ್ಷದ ಮಹಿಳೆ, ಬೆಳಗಾವಿಯ 33 ವರ್ಷದ ವ್ಯಕ್ತಿ, ವಿಜಯಪುರದ 69 ವರ್ಷದ ವೃದ್ಧನಲ್ಲಿ ಸೋಂಕು ದೃಢಪಟ್ಟಿದೆ.
ಒಟ್ಟು ಬೆಂಗಳೂರು ನಗರದಲ್ಲಿ 80, ಮೈಸೂರಿನಲ್ಲಿ 48, ಬೆಳಗಾವಿಯಲ್ಲಿ 18, ಕಲಬುರಗಿಯಲ್ಲಿ 16 ಪ್ರಕರಣಗಳು, ಬೀದರ್ನಲ್ಲಿ 13, ದಕ್ಷಿಣ ಕನ್ನಡದಲ್ಲಿ 12, ಉತ್ತರ ಕನ್ನಡದಲ್ಲಿ 9, ಚಿಕ್ಕಬಳ್ಳಾಪುರದಲ್ಲಿ 9, ಬಾಗಲಕೋಟೆಯಲ್ಲಿ 12, ಮಂಡ್ಯದಲ್ಲಿ 8, ಬಳ್ಳಾರಿಯಲ್ಲಿ 6, ದಾರಾವಾಡದಲ್ಲಿ 6, ವಿಜಯಪುರದಲ್ಲಿ 7, ಬೆಂಗಳೂರು ಗ್ರಾಮಾಂತರದಲ್ಲಿ 5, ದಾವಣಗೆರೆಯಲ್ಲಿ 3, ಉಡುಪಿಯಲ್ಲಿ , ಕೊಡಗು, ತುಮಕೂರು, ಗದಗದಲ್ಲಿ ತಲಾ 1 ಪ್ರಕರಣಗಳು ವರದಿಯಾಗಿದೆ.