ಗಾಂಧಿನಗರ, ಎ.15 (Daijiworld News/MB) : ಗುಜರಾತ್ನ ಕಾಂಗ್ರೆಸ್ ಶಾಸಕರೊಬ್ಬರಿಗೆ ಕೊರೊನಾ ವೈರಸ್ ಸೋಂಕು ತಗುಲಿರುವುದು ಮಂಗಳವಾರ ದೃಡಪಟ್ಟಿದೆ.
ಸೋಂಕಿತ ಶಾಸಕ ಇಮ್ರಾನ್ ಖೇಡಾವಾಲಾ ಮುಖ್ಯಮಂತ್ರಿ ವಿಜಯ್ ರೂಪಾಣಿ ಹಾಗೂ ಇತರ ಸಚಿವರೊಂದಿಗೆ ಸಭೆ ನಡೆಸಿದ ಗಂಟೆಗಳ ಬಳಿಕ ಕೊರೊನಾ ವೈರಸ್ ಸೋಂಕು ದೃಡಪಟ್ಟಿದೆ ಎಂದು ಹೇಳಲಾಗಿದೆ.
ಶಾಸಕರಲ್ಲಿ ಸೋಂಕಿಲ ಲಕ್ಷಣಗಳು ಕಂಡು ಬಂದ ಕಾರಣದಿಂದಾಗಿ ಕೊರೊನಾ ಪರೀಕ್ಷೆ ಮಾಡಲಾಗಿದೆ ಎಂದು ತಿಳಿದು ಬಂದಿದೆ.
ಸೋಂಕಿತ ಶಾಸಕರನ್ನು ಪ್ರಸ್ತುತ ಗಾಂಧಿನಗರದ ಆಸ್ಪತ್ರೆಗೆ ದಾಖಲು ಮಾಡಲಾಗಿದ್ದು ಚಿಕಿತ್ಸೆ ನೀಡಲಾಗುತ್ತಿದೆ.
ಅವರ ಸಂಪರ್ಕಕ್ಕೆ ಬಂದಿದ್ದವರ ಮಾಹಿತಿ ಪತ್ತೆಹಚ್ಚಲಾಗುತ್ತಿದ್ದು ಮಂಗಳವಾರ ನಡೆದ ಸಭೆಯಲ್ಲಿ ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳಲಾಗಿದೆ.