ನವದೆಹಲಿ, ಏ 15 (Daijiworld News/MSP): ಮೇ.3 ರವರೆಗೆ ದೇಶಾದ್ಯಂತ ಮುಂದುವರಿಸಲಾಗಿರುವ ಲಾಕ್ ಡೌನ್ ಕುರಿತು ಕೇಂದ್ರ ಸರ್ಕಾರ ಬುಧವಾರ ವಿವರವಾದ ಮಾರ್ಗಸೂಚಿಯನ್ನು ಪ್ರಕಟಿಸಲಿದೆ.
ಪ್ರಧಾನಿ ಮೋದಿ ಅವರು ಮಂಗಳವಾರ ರಾಷ್ಟ್ರವನ್ನು ಉದ್ದೇಶಿಸಿ ಮಾಡಿದ ಭಾಷಣದಲ್ಲಿ ಲಾಕ್ ಡೌನ್ ವಿಸ್ತರಿಸುವುದಾಗಿ ಘೋಷಿಸಿದ್ದರು. ಈ ವೇಳೆ ನಿನ್ನೆ ಅಂದರೆ ಏ.೧೪ ರಂದು ಕೊನೆಗೊಳ್ಳಲಿರುವ 21 ದಿನಗಳ ಲಾಕ್ಡೌನ್ ಅನ್ನು ಮೇ 3 ರವರೆಗೆ ವಿಸ್ತರಣೆ ಮಾಡಿದ್ದರು . ಈ ವೇಳೆ ಏಪ್ರಿಲ್ 20 ರ ನಂತರ ಹಾಟ್ಸ್ಪಾಟ್ ಇಲ್ಲದ ಸ್ಥಳಗಳಲ್ಲಿ ಲಾಕ್ಡೌನ್ ನಿರ್ಬಂಧಗಳನ್ನು ಸಡಿಲಿಕೆಗೊಳಿಸುವಂತೆ ಪ್ರಧಾನ ಮಂತ್ರಿ ನರೇಂದ್ರ ಮೋದಿ ಸೂಚಿಸಿದ್ದರು. ಈ ಬಗ್ಗೆ ಮಾರ್ಗಸೂಚಿ ಬಿಡುಗಡೆಗೊಳ್ಳಲಿದೆ ಎಂದು ತಿಳಿಸಿದ್ದರು
"ಏಪ್ರಿಲ್ 20 ರವರೆಗೆ, ಕೊರೊನಾ ನಿಯಂತ್ರಣ ದೃಷ್ಟಿಯಿಂದ ಎಲ್ಲಾ ಜಿಲ್ಲೆಗಳು, ನಗರ, ರಾಜ್ಯಗಳು ಎಷ್ಟು ಕಟ್ಟುನಿಟ್ಟಿನ ಕ್ರಮಗಳನ್ನು ಜಾರಿಗೊಳಿಸುತ್ತಿವೆ ಎಂಬುದರ ಬಗ್ಗೆ ಸೂಕ್ಷ್ಮವಾಗಿ ಗಮನಿಸಲಾಗುವುದು. ಹಾಟ್ಸ್ಪಾಟ್ಗಳನ್ನು ಹೆಚ್ಚಿಸಲು ಬಿಡದ ರಾಜ್ಯಗಳಲ್ಲಿ, ಕೆ ಲವು ಷರತ್ತುಗಳೊಂದಿಗೆ ಕೆಲವು ಪ್ರಮುಖ ಚಟುವಟಿಕೆಗಳನ್ನು ಪುನರಾರಂಭಿಸಲು ಅವರಿಗೆ ಅವಕಾಶ ನೀಡಬಹುದು. ಈ ಬಗ್ಗೆ ಕೇಂದ್ರ ಸರ್ಕಾರ ಗೈಡ್ ಲೈನ್ ಬಿಡುಗಡೆ ಮಾಡಲಿದೆ ಎಂದು ಪ್ರಧಾನಿ ಭಾಷಣದ ವೇಳೆ ತಿಳಿಸಿದ್ದರು.