ಬಿಹಾರ, ಏ 15 (Daijiworld News/MSP): ಕೊರೊನಾ ನಿಯಂತ್ರಣಕ್ಕಾಗಿ ಬಿಹಾರ ಸರ್ಕಾರವೂ ದಿಟ್ಟ ಕ್ರಮವನ್ನು ಕೈಗೊಳ್ಳಲಿದ್ದು, ಪಲ್ಸ್ ಪೊಲೀಯೋದಂತೆ ಕೊರೊನಾ ಪೀಡಿತ ನಾಲ್ಕು ಜಿಲ್ಲೆಗಳಲ್ಲಿ COVID-19 ರೋಗಲಕ್ಷಣಗಳನ್ನು ಹೊಂದಿರುವ ವ್ಯಕ್ತಿಗಳನ್ನು ಪತ್ತೆಹಚ್ಚಲು ಏಪ್ರಿಲ್ 16 ರಿಂದ ಪ್ರತಿ ಮನೆ - ಮನೆಯ ತಪಾಸಣೆ ನಡೆಸಲಾಗುವುದು ಎಂದು ಮುಖ್ಯಮಂತ್ರಿ ನಿತೀಶ್ ಕುಮಾರ್ ಹೇಳಿದ್ದಾರೆ.
ಈ ಬಗ್ಗೆ ಪತ್ರಿಕಾ ಪ್ರಕಟನೆ ಹೊರಡಿಸಿದ ಬಿಹಾರ ಸರ್ಕಾರ, ಏಪ್ರಿಲ್ 16 ರಿಂದ ಸಿವಾನ್, ಬೆಗುಸರಾಯ್, ನಳಂದ ಮತ್ತು ನವಾಡಾ ಜಿಲ್ಲೆಗಳನ್ನು ಒಳಗೊಂಡಂತೆ ಮನೆ ಮನೆ ತಪಾಸಣೆ ಅಭಿಯಾನ ಪ್ರಾರಂಭವಾಗಲಿದೆ ಎಂದು ತಿಳಿಸಿದೆ. ಈ ಮೂಲಕ ಕೊರೊನಾ ವಿರುದ್ದ ಇಂತಹ ಕ್ರಮಗಳನ್ನು ಕೈಗೊಂಡ ದೇಶದ ಮೊದಲ ರಾಜ್ಯ ಎಂಬ ಹೆಗ್ಗಳಿಕೆಗೆ ಪಾತ್ರವಾಗಲಿದೆ.
ಈ ಅಭಿಯಾನವೂ ಪಲ್ಸ್ ಪೋಲಿಯೊ ಅಭಿಯಾನದ ಮಾದರಿಯಲ್ಲಿ ನಡೆಸಿ ,ಸೋಂಕಿತ ಜನರು ಕಂಡುಬಂದ ಪ್ರದೇಶಗಳಿಗೆ ವಿಶೇಷ ಗಮನ ನೀಡಲಾಗುವುದು. ಸೋಂಕಿತ ಜನರನ್ನು ಕೇಂದ್ರಬಿಂದುವಾಗಿ, ಮನೆ ಬಾಗಿಲಿಗೆ ತಪಾಸಣೆ ನಡೆಸಿ ಚಿಕಿತ್ಸೆಗೆ ಸೂಚನೆ ನಿಡಲಾಗುತ್ತದೆ, ತಪಾಸಣೆ ವೇಳೆ ಹಿರಿಯ ನಾಗರಿಕರ ಮೇಲೆ ವಿಶೇಷ ಗಮನಹರಿಸಿ ಮೂರು ಕಿಲೋಮೀಟರ್ ವ್ಯಾಪ್ತಿಯಲ್ಲಿ ನಡೆಸಲಾಗುವುದು. ಮಾತ್ರವಲ್ಲದೆ ಮಾರ್ಚ್ 1 ರಿಂದ 23 ರವರೆಗೆ ರಾಜ್ಯಕ್ಕೆ ಪ್ರವೇಶಿಸಿದ ಎಲ್ಲ ಜನರ ತಪಾಸಣೆಯನ್ನು ಮನೆ-ಮನೆ ತಪಾಸಣೆ ವಿಧಾನದ ಮೂಲಕವೂ ನಡೆಸಬೇಕು ಎಂದು ಎಂದು ಸಿಎಂ ನಿತೇಶ್ ತಿಳಿಸಿದ್ದಾರೆ.
ತಪಾಸಣೆಗಾಗಿ ತೆರಳುವ ಆರೋಗ್ಯ ಸಿಬ್ಬಂದಿಗಳಿಗೆ ವಿಶೇಷ ತರಬೇತಿ ನೀಡಿ ವೈದ್ಯಕೀಯ ಮತ್ತು ರಕ್ಷಣಾತ್ಮಕ ಸಾಧನಗಳಾದ ಮುಖವಾಡಗಳು ಮತ್ತು ಕೈಗವಸುಗಳು ಒದಗಿಸಲಾಗುವುದು ಎಂದು ಹೇಳಿದ್ದಾರೆ. ಬಿಹಾರದಲ್ಲಿ ಇದುವರೆಗೆ 66 ಪ್ರಕರಣಗಳು ದೃಡಪಟ್ಟಿದೆ.