ನವದೆಹಲಿ, ಎ.15 (DaijiworldNews/PY) : ಭಾರತದಲ್ಲಿರುವ ಎರಡು ಜಾತಿಯ ಬಾವಲಿಗಳಲ್ಲಿ ಕೊರೊನಾ ಸೋಂಕಿನ ಲಕ್ಷಣಗಳಿವೆ ಎಂಬುದನ್ನು ಇಂಡಿಯನ್ ಕೌನ್ಸಿಲ್ ಆಫ್ ಮೆಡಿಕಲ್ ರಿಸರ್ಚ್ ನ ಸಂಶೋಧಕರು ಪತ್ತೆ ಹಚ್ಚಿದ್ದಾರೆ.
ಭಾರತದಲ್ಲಿ 119 ಜಾತಿಯ ಬಾವಲಿಗಳಿದ್ದು, ಇದರಲ್ಲಿ ಎರಡು ಜಾತಿಯ ಬಾವಲಿಗಳಿಂದ ಕೊರೊನಾ ಬಂದಿದೆ. ಸೋಂಕು ಕಂಡುಬಂದಿದೆ ಎಂದು ಎ.13ರಂದು ವರದಿಯೊಂದು ತಿಳಿಸಿತ್ತು.
ಬಾವಲಿಗಳಿಗೆ ಸೋಂಕುಗಳನ್ನು ಹರಡುವ ಹಾಗೂ ಸಂರಕ್ಷಿಸುವ ಸಾಮರ್ಥ್ಯವಿದೆ. ಸಾಕಷ್ಟು ಬಗೆಯ ವೈರಸ್ಗಳ ನೈಸರ್ಗಿಕ ಮೂಲವೇ ಬಾವಲಿಗಳೇ ಆಗಿವೆ ಎಂದು ಹೇಳಲಾಗುತ್ತದೆ. ಬಾವಲಿಗಳಿಂದ ಕಳೆದ ಎರಡು ವರ್ಷಗಳ ಹಿಂದೆ ಕೇರಳದಲ್ಲಿ ನಿಫಾ ವೈರಸ್ ಹರಡಿತ್ತು.
ಬಾವಲಿಗಳಲ್ಲಿ ಸಿವಿಯರ್ ಅಕ್ಯೂಟ್ ರೆಸ್ಪಿರೇಟರಿ ಸಿಂಡ್ರೋಮ್ ಕೊರೊನಾವೈರಸ್ ಕೂಡಾ ಕಾಣಬಹುದಾಗಿದೆ.