ನವದೆಹಲಿ, ಎ.15 (Daijiworld News/MB) : ದೆಹಲಿ ಪೊಲೀಸರು ತಬ್ಲೀಗಿ ಜಮಾತ್ನ ಮುಖ್ಯಸ್ಥ ಮೌಲಾ ಸಾದ್ ಖಂಡಾಲ್ವಿ ಹಾಗೂ ಇತರರ ವಿರುದ್ಧ 'ಕೊಲೆಯಲ್ಲದ ದಂಡನೀಯ ಮಾನವಹತ್ಯೆ' ಪ್ರಕರಣ ದಾಖಲು ಮಾಡಿದ್ದಾರೆ.
ಮಾರ್ಚ್ ತಿಂಗಳಲ್ಲಿ ದೆಹಲಿಯಲ್ಲಿ ಧಾರ್ಮಿಕ ಸಮಾವೇಶ ನಡೆದಿದ್ದು ದೇಶದಲ್ಲಿ ಕೊರೊನಾ ಪ್ರಕರಣಗಳು ಹೆಚ್ಚಾಗಲು ಈ ಕಾರ್ಯಕ್ರಮವೂ ಕಾರಣ ಎಂದು ಹಲವರ ಅಭಿಪ್ರಾಯವಾಗಿತ್ತು. ಇದೀಗ ತಬ್ಲೀಗಿ ಜಮಾತ್ನ ಮುಖ್ಯಸ್ಥ ಮೌಲಾ ಸಾದ್ ಖಂಡಾಲ್ವಿ ಹಾಗೂ ಇತರ 16 ಮಂದಿಗೆ ವಿಚಾರಣೆಗೆ ಹಾಜರಾಗಲು ನೊಟೀಸ್ ಜಾರಿ ಮಾಡಲಾಗಿದ್ದು , ಆ ಪೈಕಿ 11 ಜನ "ನಾವು ಕೋಂ ಕ್ವಾರಂಟೈನ್ಗೆ ಒಳಪಟ್ಟಿದ್ದೇವೆ" ಎಂದು ಕಾರಣ ನೀಡಿ ಈವರೆಗೆ ತನಿಖೆಗೆ ಹಾಜರಾಗಿಲ್ಲ.
ಈಗಾಗಲೇ ಪೊಲೀಸರು ಈ ತಬ್ಲೀಗಿ ಜಮಾತ್ನ 1,890 ಅನುಯಾಯಿಗಳು ದೇಶದಿಂದ ಹೊರಗೆ ಹೋಗುವುದನ್ನು ತಡೆಯುವ ನಿಟ್ಟಿನಲ್ಲಿ ಲುಕೌಟ್ ನೊಟೀಸ್ ಜಾರಿಗೊಳಿಸಿದ್ದಾರೆ.
ಮಾರ್ಚ್ ತಿಂಗಳಲ್ಲಿ ದೆಹಲಿಯ ನಿಜಾಮುದ್ದೀನ್ನಲ್ಲಿರುವ ತಬ್ಲೀಗಿ ಜಮಾತ್ನ ಪ್ರಧಾನ ಕಚೇರಿಯಲ್ಲಿ ಸುಮಾರು 2,300 ಮಂದಿಯನ್ನು ತೆರವುಗೊಳಿಸಲಾಗಿದ್ದು ಅಲ್ಲಿಂದ ತಮ್ಮ ಮನೆಗೆ ಬಂದ ಹಾಗೂ ಅವರ ಸಂಪರ್ಕಕ್ಕೆ ಬಂದ ಹಲವರಲ್ಲಿ ಕೊರೊನಾ ದೃಢಪಟ್ಟಿತ್ತು.