ನವದೆಹಲಿ, ಎ.15 (Daijiworld News/MB) : ಕೊರೊನಾ ವೈರಸ್ ಹರಡುವಿಕೆ ಕುರಿತಾಗಿ ಹಾರ್ವರ್ಡ್ನ ಸಂಶೋಧಕರು ನಡೆಸಿರುವ ಸಂಶೋಧನೆ ಪ್ರಕಾರ ಕೊರೊನಾ ವೈರಸ್ ಹರಡುವುದನ್ನು ತಡೆಯುವ ನಿಟ್ಟಿನಲ್ಲಿ 2022ರವರೆಗೂ ಸಾಮಾಜಿಕ ಅಂತರ ಕಾಪಾಡಿಕೊಂಡು ಬರಬೇಕಾಗಬಹುದು.
ಸೈನ್ಸ್ ಜರ್ನಲ್ ಅಧ್ಯಯನದ ವರದಿ ಮಂಗಳವಾರ ಪ್ರಕಟವಾಗಿದ್ದು, ಕೊರೊನಾ ವೈರಸ್ ತಡೆಗಟ್ಟುವ ನಿಟ್ಟಿನಲ್ಲಿ ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳಲಾಗಿದೆ. ಆದರೆ ಇದು ಕೊರೊನಾ ತಡೆಗಟ್ಟಲು ಸಾಕಾಗುವುದಿಲ್ಲ. ಪ್ರಸ್ತುತ ಅನುಸರಣೆ ಮಾಡಲಾಗುವ ಸಾಮಾಜಿಕ ಅಂತರವನ್ನು ಒಮ್ಮೆಲ್ಲೇ ತೆರವು ಮಾಡುವುದರಿಂದಾಗಿ ಕೊರೊನಾ ವೈರಸ್ ಹರಡುವಿಕೆ ಮತ್ತಷ್ಟು ಹೆಚ್ಚಾಗುತ್ತದೆ. ಅದು ಅಪಾಯಕಾರಿ ಎಂದು ತಿಳಿಸಿದೆ
ಇದೊಂದು ರೀತಿಯಲ್ಲಿ ಕಾಲ ಕಾಲಕ್ಕೆ ಹರಡುವ ಸೋಂಕಾಗಿದ್ದು ಇದನ್ನು ತಡೆಗಟ್ಟಲು ಕೇವಲ ಒಂದೇ ಮಾರ್ಗವನ್ನು ಅನುಸರಣೆ ಮಾಡಲಾಗದು. ಸೋಂಕು ಹರಡುವಿಕೆ ತಡೆಯಲು ಬೇರೆ ಪ್ರಯತ್ನಗಳನ್ನು ನಡೆಸಬೇಕು ಎಂದು ವರದಿ ವಿವರಿಸಿದೆ.