ಬೆಂಗಳೂರು, ಎ.15 (DaijiworldNews/PY) : ದೇಶದಲ್ಲಿ ಎರಡನೇ ಹಂತದ ಲಾಕ್ಡೌನ್ ಮೇ 3ರವರೆಗೂ ವಿಸ್ತರಣೆಯಾಗಿದ್ದು, ಕೇಂದ್ರ ಸರ್ಕಾರ ಬುಧವಾರ ಮಾರ್ಗಸೂಚಿಯನ್ನು ಹೊರಡಿಸಿದ್ದು, ಮದ್ಯ ಮಾರಾಟವನ್ನು ನಿಷೇಧಿಸಿದೆ.
ಅಲ್ಲದೇ, ತಂಬಾಕು, ಉತ್ಪನ್ನಗಳು, ಗುಟ್ಕಾ, ಬೀಡಿ, ಸಿಗರೇಟ್ ಮಾರಾಟವನ್ನು ಕೂಡಾ ಸರ್ಕಾರ ನಿಷೇಧಿಸಿದೆ.
ಕೇಂದ್ರ ಸರ್ಕಾರವು ಎಲ್ಲಾ ರೀತಿಯ ಮದ್ಯ ಮಾರಾಟಕ್ಕೆ ನಿಷೇಧ ಹಾಕಿದ್ದು, ಮೇ 3ರವರೆಗೂ ಬಾರ್, ಕ್ಲಬ್, ಪಬ್ಗಳನ್ನು ಕೂಡಾ ತೆರೆಯುವಂತಿಲ್ಲ ಎಂದು ಮಾರ್ಗಸೂಚಿಯಲ್ಲಿ ತಿಳಿಸಿದೆ.
ಸಿಎಂ ಬಿಎಸ್ವೈ ಅವರು ಕೇಂದ್ರದ ಮಾರ್ಗಸೂಚಿಗಲು ಬಂದ ಬಳಿಕ ಮದ್ಯ ಮಾರಾಟಕ್ಕೆ ಅವಕಾಶ ನೀಡುವ ವಿಚಾರದ ಬಗ್ಗೆ ಸುಳಿವು ನೀಡಿದ್ದರು. ಇದೀಗ ಮಾರ್ಗ ಸೂಚಿಯಲ್ಲಿ ಕೇಂದ್ರ ಸರ್ಕಾರವೇ ನಿಷೇಧ ಹೇರಿರುವುದರಿಂದ ರಾಜ್ಯ ಪಾಲನೆ ಮಾಡಬೇಕಾಗಿದೆ.
ಕೇಂದ್ರದ ಮಾರ್ಗಸೂಚಿಗಳು ಬಂದ ಮೇಲೆ ಮದ್ಯ ಮಾರಾಟಕ್ಕೆ ಅವಕಾಶ ನೀಡುವ ಬಗ್ಗೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಸುಳಿವು ನೀಡಿದ್ದರು. ಇದೀಗ ಕೇಂದ್ರ ಸರ್ಕಾರವೇ ಮಾರ್ಗಸೂಚಿಯಲ್ಲಿ ನಿಷೇಧ ಹೇರಿರುವುದರಿಂದ ರಾಜ್ಯ ಪಾಲನೆ ಮಾಡಬೇಕಾಗಿದೆ.