ಬೆಂಗಳೂರು, ಎ.15 (DaijiworldNews/PY) : ಮಕ್ಕಳೊಂದಿಗೆ ಮನೆಯಲ್ಲಿರುವುದು ತಪ್ಪಾ? ರಾತ್ರಿ ಈ ಕಾಂಗ್ರೆಸ್ ನಾಯಕರು ಏನು ಮಾಡುತ್ತಾರೆ? ಸಿಗದೇ ಇರುವ ವಸ್ತುಗಳು ಹೇಗೆ ಸಿಗುತ್ತವೆ? ರಾಜ್ಯದ ಕೆಪಿಸಿಸಿ ಅಧ್ಯಕ್ಷರಾಗಿ ನೀವು ಏನು ಮಾಡಿದ್ದೀರಿ?ಕಾರ್ಯಕರ್ತರು ನೀಡುವ ಕಿಟ್ ಬಳಿ ಹೋಗಿ ಫೋಟೋ ತೆಗೆಸಿಕೊಳ್ಳುವುದು ಎಷ್ಟು ಸರಿ? ಎಂದು ಸಿಎಂ ಕಾರ್ಯದರ್ಶಿ ವಿಶ್ವನಾಥ್ ಅವರು ಹೇಳಿದರು.
ಸಚಿವ ಸುಧಾಕರ್ ರಾಜೀನಾಮೆ ನೀಡಲು ಎಂದು ಡಿಕೆಶಿ ಹೇಳಿಕೆ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ರಾಜ್ಯದ ಕೆಪಿಸಿಸಿ ಅಧ್ಯಕ್ಷರಾಗಿ ನೀವು ಏನು ಮಾಡಿದ್ದೀರಿ?ಕಾರ್ಯಕರ್ತರು ನೀಡುವ ಕಿಟ್ ಬಳಿ ಹೋಗಿ ಫೋಟೋ ತೆಗೆಸಿಕೊಳ್ಳುವುದು ಎಷ್ಟು ಸರಿ? ಸ್ವತಃ ನೀವೆ ಸಹಾಯ ಮಾಡಬೇಕು ಎಂದು ತಿಳಿಸಿದರು.
ನೆಲಮಂಗಲ ಬಸವಣ್ಣ ದೇವರ ಮಠದಲ್ಲಿ ಊಟ ಸ್ಥಗಿತ ವಿಚಾರವಾಗಿ ಅಧಿಕಾರಿಗಳು ಹಾಗೂ ಸ್ವಾಮೀಜಿ ಅವರೊಂದಿಗೆ ಮಾತನಾಡುತ್ತೇನೆ. ಪ್ರತಿನಿತ್ಯದಂತೆ ಊಟ ತಯಾರಿ ಮಾಡಿ ಬಡವರಿಗೆ ಹಂಚುವಂತೆ ಮನವಿ ಮಾಡುತ್ತೇನೆ. ನೆಲಮಂಗಲ ಶಾಸಕರು ಲಾಕ್ಡೌನ್ ಸಂದರ್ಭ ರಾಜಕೀಯ ಮಾಡಬಾರದು. ಮಠದಲ್ಲಿ ಸ್ವಯಂ ಸೇವಕರು, ಬಡವರಿಗಾಗಿ ಜನರು ಸೇವೆ ಸಲ್ಲಿಸಿದ್ದಾರೆ. ಮಠದಲ್ಲಿ ಊಟ ಸ್ಥಗಿತ ವಿಚಾರ ಸರಿಯಲ್ಲ ಎಂದು ತಿಳಿಸಿದರು.
ವಿಶ್ವನಾಥ್ ಅವರ ನೇತೃತ್ವದಲ್ಲಿ ಗ್ರಾಮಸ್ಥರಿಗೆ ದಿನಸಿ ಸಾಮಾಗ್ರಿಯನ್ನು ನೀಡಲಾಯಿತು. ಆಹಾರ ಕಿಟ್ಗಳನ್ನು ನೆಲಮಂಗಲ ತಾಲೂಕಿನ ಹಂಚಿಪುರ ಗ್ರಾಮಸ್ಥರಿಗೆ ವಿತರಣೆ ಮಾಡಲಾಯಿತು. 1,000 ಕುಟುಂಬಕ್ಕೆ ಸ್ಥಳೀಯ ಭವಾನಿ ಶಂಕರ್ ಗ್ರೂಪ್ಸ್ ವತಿಯಿಂದ ಆಹಾರ ಕಿಟ್ ವಿತರಿಸಲಾಯಿತು.
ಕೊರೊನಾ ಭೀತಿಯಿಂದಾಗಿ ಜನರು ಸಂಕಷ್ಟದಲ್ಲಿದ್ದಾರೆ. ಕೊರೊನಾ ವೈರಸ್ ಭೀತಿ ಮುಗಿದ ಬಳಿಕ ಒಬ್ಬರನ್ನೊಬ್ಬರು ಟೀಕೆ ಮಾಡಿ. ಈಗ ನಾವೆಲ್ಲರೂ ಒಟ್ಟಾಗಿ ಕೆಲಸ ಮಾಡೋಣ. ನಾವೆಲ್ಲರೂ ಒಂದೇ, ಆಮೇಲೆ ಟೀಕೆ ವ್ಯಂಗ್ಯವನ್ನು ಮಾಡೋಣ ಎಂದರು.