ಹಾಸನ, ಎ.15 (DaijiworldNews/PY) : ಜಿಲ್ಲೆಯ ಜನರು ಕೊರೊನಾ ವೈರಸ್ ಬಗ್ಗೆ ಹೆದರಿಕೊಳ್ಳುವ ಅಗತ್ಯವಿಲ್ಲ. ಅಧಿಕಾರಿಗಳು ಉತ್ತಮವಾಗಿ ಕಾರ್ಯನಿರ್ವಹಿಸಿದ್ದಾರೆ. ಜನರು ಮುಂದಿನ ಐದು ದಿನಗಳವರೆಗೆ ಶಿಸ್ತಿನಿಂದ ಇರಬೇಕು ಎಂದು ಸಚಿವ ಮಾಧುಸ್ವಾಮಿ ಹೇಳಿದರು.
ಹಾಸನದಲ್ಲಿ ಅಧಿಕಾರಿಗಳು, ಜನಪ್ರಧಿನಿಧಿಗಳೊಂದಿಗೆ ಸಭೆ ನಡೆಸಿ ಮಾತನಾಡಿದ ಅವರು, ರಾಜ್ಯದಲ್ಲಿ ಲಾಕ್ಡೌನ್ ಸಡಿಲವಾಗಲಿದೆ. ಕೃಷಿ, ಗೂಡ್ಸ್ ವಾಹನ ಓಡಾಟಕ್ಕೆ ಅವಕಾಶ ನೀಡಲಾಗುವುದು. ಹಾಸನ ಸುರಕ್ಷಿತ ಆಗಿರುವುದರಿಂದ ಕೃಷಿ ಚಟುವಟಿಕೆ ನಡೆಸಲು ಮಾಡಲು ಸಮಸ್ಯೆಯಿಲ್ಲ. ಇಬ್ಬರು ಮಾತ್ರವೇ ಟ್ಯಾಕ್ಸಿಯಲ್ಲಿ ಹೋಗಬೇಕು. ಒಬ್ಬರಷ್ಟೇ ಬೈಕ್ನಲ್ಲಿ ಸಂಚರಿಸಬೇಕು ಎಂದು ತಿಳಿಸಿದರು.
ಜಿಲ್ಲೆಯಲ್ಲಿ ಸುಮಾರು 4 ಲಕ್ಷ ಮನೆಗಳನ್ನು ಸರ್ವೆ ಮಾಡಲಾಗಿದೆ. 50 ಕಡೆ ಪರೀಕ್ಷೆಗೆ ಬೇಕಾದ ವ್ಯವಸ್ಥೆ ಮಾಡುತ್ತೇವೆ. ಮತ್ತೆ 10 ಕೆಜಿ ಅಕ್ಕಿಯನ್ನು ಮೇ.1ರೊಳಗೆ ನೀಡಲಾಗುವುದು. ಜನರು ಹೊರ ಬರದಂತೆ ಮನೆಯಲ್ಲೇ ಇರಬೇಕು ಎಂದು ಸೂಚನೆ ನೀಡಿದರು.
ಜನರಿಗೆ ವರಮಾನದ ಮೂಲ ಕಡಿಮೆಯಾಗಿರಬಹುದು. ಇಂತಹ ಕಷ್ಟದ ಸನ್ನಿವೇಶದಲ್ಲಿ ಇದೆಲ್ಲಾ ಸಾಮಾನ್ಯ. ನಾವು ಸಾಮಾಜಿತ ಅಂತರ ಕಾಯ್ದುಕೊಂಡರೆ ನಾರ್ಮಲ್ ಲೈಫ್ಗೆ ಮರಳಬಹುದು. ಜನರು ಸಹಕರಿಸಬೇಕು ಎಂದು ತಿಳಿಸಿದರು.