ಬೆಂಗಳೂರು, ಎ.16 (Daijiworld News/MB) : ರಾಜ್ಯ ಸರ್ಕಾರ ವಿವಿಧ ಬಗೆಯ 34 ಖಾಸಗಿ ವಲಯಗಳ ಉದ್ದಿಮೆಗಳ ಅಸಂಘಟಿತ ಕಾರ್ಮಿಕರ ಕನಿಷ್ಠ ವೇತನ ಹೆಚ್ಚಳ ಮಾಡಿ ನೀಡಿದ್ದ ಆದೇಶವನ್ನು ಹೈಕೋರ್ಟ್ ಊರ್ಜಿತಗೊಳಿಸಿದೆ.
34 ಖಾಸಗಿ ವಲಯಗಳ ಉದ್ದಿಮೆಗಳ ಅಸಂಘಟಿತ ಕಾರ್ಮಿಕರ ಕನಿಷ್ಠ ವೇತನ ಹೆಚ್ಚಳ ಮಾಡುವುದರ ಕುರಿತಾಗಿ ಖಾಸಗಿ ಉದ್ದಿಮೆಗಳು, ಹೊಟೇಲ್ ಮತ್ತು ಆಸ್ಪತ್ರೆಗಳು ಹೈಕೋರ್ಟ್ಗೆ ಮೇಲ್ಮನವಿ ಸಲ್ಲಿಸಿದ್ದು ಮುಖ್ಯ ನ್ಯಾಯಮೂರ್ತಿ ಎ.ಎಸ್. ಓಕ್ ನೇತೃತ್ವದ ವಿಭಾಗೀಯ ನ್ಯಾಯಪೀಠ ಆ ಮೇಲ್ಮನವಿಯನ್ನು ವಜಾಗೊಳಿಸಿದ್ದು ಈ ಕುರಿತಾಗಿ 2019ರ ಮಾ. 29ರಂದು ಏಕಸದಸ್ಯ ನ್ಯಾಯಪೀಠ ನೀಡಿದ್ದ ತೀರ್ಪನ್ನು ಎತ್ತಿ ಹಿಡಿದಿದ್ದಾರೆ.
ಆದರೆ ಪ್ರಸ್ತುತ ಕೊರೊನಾ ಲಾಕ್ಡೌನ್ನಿಂದಾಗಿ ಜನಜೀವನ ಸಂಕಷ್ಟದಲ್ಲಿರುವ ಕಾರಣದಿಂದಾಗಿ ಹೈಕೋರ್ಟ್ ತೀರ್ಪು ಪ್ರಶ್ನಿಸಿ ಅರ್ಜಿದಾರರಿಗೆ ಸುಪ್ರೀಂ ಕೋರ್ಟ್ನಲ್ಲಿ ಅರ್ಜಿ ಸಲ್ಲಿಸಲು ಅನುಕೂಲವಾಗುವ ನಿಟ್ಟಿನಲ್ಲಿ ನ್ಯಾಯಪೀಠವು ತನ್ನ ಆದೇಶಕ್ಕೆ ತಾನೇ 12 ವಾರಗಳ ಕಾಲ ತಡೆಯಾಜ್ಞೆ ನೀಡಿದೆ.