ನವದೆಹಲಿ, ಎ.16 (Daijiworld News/MB) : ಕೊರೊನಾ ನಿಯಂತ್ರಣ ಮಾಡುವ ನಿಟ್ಟಿನಲ್ಲಿ ದೇಶದಾದ್ಯಂತ ಲಾಕ್ಡೌನ್ ಘೋಷಣೆ ಮಾಡಿರುವ ಕಾರಣದಿಂದಾಗಿ ಆರೋಗ್ಯ ಮತ್ತು ಮೋಟಾರ್ (ಥರ್ಡ್ ಪಾರ್ಟಿ) ವಿಮಾ ಪಾಲಿಸಿ ಕಂತು ಪಾವತಿ ಮಾಡುವುದಕ್ಕೆ ಮೇ 15 ರವರೆಗೆ ವಿನಾಯಿತಿ ನೀಡಲಾಗಿದೆ ಎಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಘೋಷಿಸಿದ್ದಾರೆ.
ಈ ಕುರಿತಾಗಿ ಸರ್ಕಾರ ಅಧಿಸೂಚನೆ ಪ್ರಕಟಿಸಿದ್ದು ಈ ವಿನಾಯಿತಿಯು ಮಾರ್ಚ್ 25ರಿಂದ ಮೇ 3ರ ನಡುವೆ ಕಂತು ಪಾವತಿ ಮಾಡಬೇಕಿದ್ದ ಪಾಲಿಸಿಗೆ ಅನ್ವಯವಾಗುತ್ತದೆ ಎಂದು ತಿಳಿಸಿದೆ.
ಆದರೆ ಕಂತು ವಿನಾಯಿತಿಯ ಸಂದರ್ಭದಲ್ಲಿಯೂ ವಿಮಾ ಕಂಪನಿಗಳು ಕ್ಲೇಮ್ಗಳ ಪ್ರಕ್ರಿಯೆಯನ್ನು ಎಂದಿನಂತೆ ನಡೆಸಬೇಕು ಎಂದು ಅವರು ಸೂಚಿಸಿದ್ದಾರೆ.
ಮೊದಲ ಲಾಕ್ಡೌನ್ ಸಂದರ್ಭದಲ್ಲಿ ಗೃಹ ಸಾಲ ಸೇರಿದಂತೆ ವಿವಿಧ ಸಾಲಗಳ ಕಂತು ಪಾವತಿಗೆ ಕೇಂದ್ರ ಸಚಿವಾಲಯ ಮೂರು ತಿಂಗಳ ವಿನಾಯಿತಿ ಘೋಷಿಸಿದೆ.