ನವದೆಹಲಿ, ಎ.16 (Daijiworld News/MB) : ದೇಶದಲ್ಲಿ ಕೊರೊನಾ ಪ್ರಕರಂಗಳು ದಿನದಿಂದ ದಿನಕ್ಕೆ ಹೆಚ್ಚುತ್ತಲ್ಲೇ ಇದ್ದು ಇಂದು ಚೀನಾದಿಂದ ಭಾರತಕ್ಕೆ ಮೊದಲ ಬ್ಯಾಚಿನ 3 ಲಕ್ಷ ರ್ಯಾಪಿಡ್ ಟೆಸ್ಟ್ ಕಿಟ್ಗಳು ತಲುಪಲಿದೆ.
ಭಾರತ ಕಿಟ್ಗಳಿಗಾಗಿ ಚೀನಾ ಸರ್ಕಾರಕ್ಕೆ ತಿಳಿಸಿದ ಪ್ರಕಾರವಾಗಿ ಏ.6ಕ್ಕೆ 7 ಲಕ್ಷ ಕಿಟ್ಗಳು ಭಾರತಕ್ಕೆ ತಲುಪಬೇಕಿತ್ತು. ಆದರೆ ಲಾಜಿಸ್ಟಿಕ್ಸ್ ಸಮಸ್ಯೆ ಮತ್ತು ಪರೀಕ್ಷಾ ಕಾರಣದಿಂದ ತಡವಾಗಿದ್ದು ಇದೀಗ 3 ಲಕ್ಷ ರ್ಯಾಪಿಡ್ ಟೆಸ್ಟ್ ಕಿಟ್ಗಳು ಭಾರತಕ್ಕೆ ಇಂದು ಲ್ಯಾಂಡ್ ಆಗಲಿದೆ.
ಈ ಮೊದಲು ಕೊರೊನಾ ಪರೀಕ್ಷಾ ಕಿಟ್ಗಳನ್ನು ದಕ್ಷಿಣ ಕೊರಿಯಾ, ಫ್ರಾನ್ಸ್, ಇಸ್ರೇಲ್, ಜರ್ಮನಿ ದೇಶಗಳಿಗೆ ಚೀನಾ ಕಳುಹಿಸಿದ್ದು ಕಿಟ್ನಲ್ಲಿ ದೋಷ ಕಂಡು ಬಂದ ಕಾರಣದಿಂದಾಗಿ ಈ ದೇಶಗಳು ಕಿಟ್ಗಳನ್ನು ತಿರಸ್ಕಾರ ಮಾಡಿತ್ತು. ಆ ಬಳಿಕ ಚೀನಾ ಗುಣಮಟ್ಟದ ಕಂಪನಿಗಳನ್ನು ಕಿಟ್ ತಯಾರಿಕೆಗೆ ಪಟ್ಟಿ ಮಾಡಿದೆ.
ಇದೀಗ ಈ ಕಿಟ್ಗಳಿಗೆ ಕಸ್ಟಮ್ಸ್ ವಿಭಾಗ ಪರೀಕ್ಷೆ ನಡೆಸಿ ಒಪ್ಪಿಗೆ ಸೂಚಿಸಿದ್ದು ಭಾರತಕ್ಕೆ ಚೀನಾದ ಮೂರು ಕಂಪೆನಿಗಳಿಂದ ಕಿಟ್ಗಳು ಇಂದು ಆಮದಾಗಲಿದೆ. ಈ ಕಿಟ್ಗಳನ್ನು ಅತೀ ಹೆಚ್ಚು ಕೊರೊನಾ ಪ್ರಕರಣಗಳು ಬಂದಿರುವ ಹಾಟ್ಸ್ಪಾಟ್ಗಳಲ್ಲಿ ಪರೀಕ್ಷೆ ನಡೆಸಲು ಬಳಸಲಾಗುತ್ತದೆ.