ಉತ್ತರ ಪ್ರದೇಶ, ಎ.16 (DaijiworldNews/PY) : ವ್ಯಕ್ತಿಯೋರ್ವ ಕೆಮ್ಮಿದ ಕಾರಣ ಆತನಿಗೆ ಗುಂಡು ಹೊಡೆದ ಘಟನೆ ದಯಾನಗರ ಗ್ರಾಮದಲ್ಲಿ ನಡೆದಿದೆ.
ರಾತ್ರಿ 9 ಗಂಟೆಯ ಸುಮಾರಿಗೆ ಗ್ರಾಮದ ದೇವಸ್ಥಾನದ ಆವರಣದಲ್ಲಿ ಮೂವರು ಲೂಡೋ ಆಡುತ್ತಿದ್ದರು. ಆ ಸಂದರ್ಭ ಅಲ್ಲಿಗೆ ಪ್ರಶಾಂತ್ ಸಿಂಗ್ ಎಂಬ ಯುವಕ ಆಟ ನೋಡುತ್ತಾ ನಿಂತಿದ್ದನು. ಈ ವೇಳೆ ಆತ ಕೆಮ್ಮಿದ ಕಾರಣ ಕೊರೊನಾ ಸೋಂಕು ಹರಡುತ್ತಿರುವಾಗ ಇಲ್ಲಿ ಏಕೆ ಕೆಮ್ಮಿದ್ದು ಎಂದು ಮೂವರು ಪ್ರಶಾಂತ್ ಸಿಂಗ್ ಅನ್ನು ಮಾತಿಗೆ ಮಾತು ಬೆಳೆದು ಜಗಳ ನಡೆದಿದೆ.
ಜಗಳ ನಡೆಯುತ್ತಿದ್ದ ಸಂದರ್ಭ ತಾಳ್ಮೆ ಕಳೆದುಕೊಂಡ ಜೈವೀರ್ ಸಿಂಗ್ ಎಂಬಾತ ಪಿಸ್ತೂಲ್ ತೆಗೆದು ಪ್ರಶಾಂತ್ನತ್ತ ಗುಂಡು ಹಾರಿಸಿದ್ದಾನೆ. ಪ್ರಶಾಂತ್ಗೆ ಗುಂಡು ತಗುಲಿದ್ದು, ಗಂಭೀರವಾಗಿ ಗಾಯಗೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಗುಂಡೇಟಿನಿಂದ ಗಾಯಗೊಂಡಿರುವ ಪ್ರಶಾಂತ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಅವರ ಆರೋಗ್ಯ ಸ್ಥಿರವಾಗಿದೆ. ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಗುಂಡು ಹಾರಿಸಿದ ಆರೋಪಿಯ ಪತ್ತೆ ಕಾರ್ಯನಡೆಯುತ್ತಿದೆ ಎಂದು ತಿಳಿಸಿದ್ದಾರೆ.