ಬೆಂಗಳೂರು, ಏ15 (Daijiworld News/MSP): ಲಾಕ್ಡೌನ್ ಹಿನ್ನೆಲೆಯಲ್ಲಿ ಮಕ್ಕಳು ಮನೆಯಿಂದಲೇ ಕಲಿಯಲು ಕರ್ನಾಟಕ ಶಿಕ್ಷಣ ಇಲಾಖೆ ಹೊಸ ಪ್ರಯತ್ನಕ್ಕೆ ಕೈಹಾಕಿದ್ದು, 'ಮಕ್ಕಳ ವಾಣಿ' ಎಂಬ ಯೂಟ್ಯೂಬ್ ಚಾನೆಲ್ ಪ್ರಾರಂಭಿಸಿದೆ. ಮಕ್ಕಳಿಗೆ ಹಾಗೂ ಪೋಷಕರಿಗೆ ಸಹಕಾರಿಯಾಗವ ದೃಷೀಕೋನದಿಂದ ಪ್ರಾರಂಭಿಸಲಾಗಿರುವ ಯೂಟ್ಯೂಬ್ ಚಾನೆಲ್ ಗೆ ಸಿಎಂ ಬಿ.ಎಸ್. ಯಡಿಯೂರಪ್ಪ ಇಂದು ಚಾಲನೆ ನೀಡಿದ್ದಾರೆ.
ರಜೆ ದಿನಗಳಲ್ಲಿ ಮಕ್ಕಳಿಗೆ ಬೇಸರವಾಗದಂತೆ ಮಕ್ಕಳಿಗೆ ಉಪಯುಕ್ತ ಮಾಹಿತಿ ತಿಳಿಸುವುದು, ಮನರಂಜನಾ ಚಟುವಟಿಕೆಗಳನ್ನು ಚಾನೆಲ್ ಮೂಲಕ ಆಯೋಜಿಸಲಾಗುತ್ತದೆ. ಮಾತ್ರವಲ್ಲ ಕತೆ, ಹಾಡು, ಚಿತ್ರ ಕಲೆ, ಸಂಗೀತ, ಕಿರು ನಾಟಕ, ಕ್ರಾಫ್ಟ್, ಒಗಟು, ಗಾದೆ, ಮ್ಯಾಜಿಕ್, ಪದಬಂಧ ಮುಂತಾದವುಗಳ ಮೂಲಕ 1 ಗಂಟೆ ಕಾಲ ಕಾರ್ಯಕ್ರಮ ಆಯೋಜಿಸಲು ನಿರ್ಧರಿಸಲಾಗಿದೆ
ಈ ಮಕ್ಕಳ ಯುಟ್ಯೂಬ್ ಚಾನೆಲ್ ಗೆ ' ಮಕ್ಕಳ ವಾಣಿ: ನಲಿಯೋಣ, ಕಲಿಯೋಣ ' ಎಂದು ಹೆಸರಿಸಲಾಗಿದೆ. ಶಿಕ್ಷಕರು ಹಾಗೂ ಶಿಕ್ಷಣಾಸಕ್ತರು ಈ ಯೂಟ್ಯೂಬ್ ಗೆ ಉಪಯುಕ್ತ ಮಾಹಿತಿಗಳನ್ನು ಕಳುಹಿಸಲು ಅವಕಾಶ ಮಾಡಿಕೊಡಲಾಗಿದೆ.