ನವದೆಹಲಿ, ಏ15 (Daijiworld News/MSP): ಹೋಮಿಯೋಪಥಿ ಮತ್ತು ಯುನಾನಿ ಸೇರಿ ಆಯುಷ್ ಚಿಕಿತ್ಸಾ ಪದ್ಧತಿಯಲ್ಲಿ ಕೊರೊನಾಗೆ ಚಿಕಿತ್ಸೆ ಲಭ್ಯವಿದ್ದು ಈ ಪದ್ದತಿ ಮೂಲಕ ಚಿಕಿತ್ಸೆಗೆ ಅವಕಾಶ ನೀಡಬೇಕು ಎಂದು ಕೋರಿ ಸಲ್ಲಿಕೆಯಾಗಿದ್ದಅರ್ಜಿಯನ್ನು ಸುಪ್ರೀಂಕೋರ್ಟ್ ತಿರಸ್ಕರಿಸಿದೆ.
''ಕೊರೊನಾ ಎಂಬುವುದು ಹೊಸ ವೈರಾಣು ಆಗಿದ್ದು, ಇದನ್ನು ನಿಯಂತ್ರಿಸುವ ವಿಷಯದಲ್ಲಿ ಸದ್ಯ ಪ್ರಯೋಗಗಳನ್ನು ಮಾಡುವ ಮೂಲಕ ಅಪಾಯಗಳನ್ನು ಮೈಮೇಲೆ ಎಳೆದುಕೊಳ್ಳಲಾಗುವುದಿಲ್ಲ. ನುರಿತ ತಜ್ಞರು ಮೊದಲು ಇದಕ್ಕೊಂದು ವ್ಯಾಕ್ಸಿನ್ ಸಿದ್ಧಪಡಿಸಲಿ ಅಮೇಲೆ ಪ್ರಯೋಗಗಳ ಮೇಲೆ ಗಮನಹರಿಸೋಣ" ಎಂದು ಅರ್ಜಿಯನ್ನು ತಿರಸ್ಕರಿಸಿತು.
ಈ ಬಗ್ಗೆ ಡಾ. ಸಿ.ಆರ್. ಶಿವರಾಂ ಎಂಬುವರು ಅರ್ಜಿ ಸಲ್ಲಿಸಿದ್ದು, ಸುಪ್ರೀಂ ನ ನ್ಯಾಯಮೂರ್ತಿ ಎನ್.ವಿ. ರಮಣ ನೇತೃತ್ವದ ನ್ಯಾಯಪೀಠ ವಿಡಿಯೋ ಕಾನ್ಫರೆನ್ಸ್ ಮೂಲಕ ಅರ್ಜಿಯನ್ನು ವಿಚಾರಣೆ ನಡೆಸಿ ಅರ್ಜಿ ತಿರಸ್ಕರಿಸಿ ಕೊರೊನಾಗೆ ಆಯುಷ್ ಚಿಕಿತ್ಸೆ ನೀಡಲು ಅವಕಾಶ ನಿರಾಕರಿಸಿತು.