ಕೇರಳ, ಎ.16 (DaijiworldNews/PY) : ವೃದ್ದ ತಂದೆ, ತಾಯಿಯೊಂದಿಗೆ ಆಟೋ ರಿಕ್ಷಾದಲ್ಲಿ ತೆರಳುತ್ತಿದ್ದ ವೇಳೆ ಪೊಲೀಸರು ಅಡ್ಡಗಟ್ಟಿದ ಕಾರಣ ತಂದೆಯನ್ನು ಹೆಗಲ ಮೇಲೆ ಹೊತ್ತುಕೊಂಡು ಸಾಗಿದ ಘಟನೆ ಕುಳತ್ತುಪುಝದಲ್ಲಿ ನಡೆದಿದೆ.
]
ಪುನರೂರು ತಾಲೂಕಿನ ಆಸ್ಪತ್ರೆಯೊಂದರಲ್ಲಿ ಚಿಕಿತ್ಸೆಪಡೆಯುತ್ತಿದ್ದ ೬೫ ವರ್ಷದ ತಂದೆಯನ್ನು ಮಗ ಆಸ್ಪತ್ರೆಯಿಂದ ಡಿಸ್ಚಾರ್ಜ್ ಮಾಡಿಸಿಕೊಂಡು ತಾಯಿಯೊಂದಿಗೆ ಆಟೋರಿಕ್ಷಾದಲ್ಲಿ ಮನೆಗೆ ಸಾಗುತ್ತಿದ್ದರು. ಈ ಸಂದರ್ಭ ಪೊಲೀಸರು ಆಟೋರಿಕ್ಷಾವನ್ನು ತಡೆದು ನಿಲ್ಲಿಸಿದ್ದು, ವೃದ್ದ ದಂಪತಿಗಳನ್ನು ರಿಕ್ಷಾದಿಂದ ಕೆಳಗಿಳಿಸಿದ್ದಾರೆ. ಆಸ್ಪತ್ರೆಯ ದಾಖಲೆಗಳನ್ನು ತೊರಿಸಿದರೂ ಕೂಡಾ ಪೊಲೀಸರು ಲೆಕ್ಕಿಸಲಿಲ್ಲ.
ಬಳಿಕ ಮಗ ಬೇರೆ ಕಾಣದೇ ಕಾಯಿಲೆ ಬಿದ್ದ ಅಪ್ಪನನ್ನು ತನ್ನ ಹೆಗಲ ಮೇಲೆ ಹೊತ್ತುಕೊಂಡು ಉರಿ ಬಿಸಿಲಿನಲ್ಲಿ ಮನೆಗೆ ತೆರಳಿದ್ದಾರೆ.
ಈ ಸಂಬಂಧ ಕೇರಳ ರಾಜ್ಯ ಮಾನವ ಹಕ್ಕುಗಳ ಆಯುಕ್ತ ದೂರು ದಾಖಲಿಸಲಾಗಿದೆ.
ದೇಶದಲ್ಲಿ ಮೊದಲು ಕೊರೊನಾ ವೈರಸ್ ಪ್ರಕರಣವು ಕೇರಳದಲ್ಲಿ ದಾಖಲಾಗಿತ್ತು. ಕಟ್ಟುನಿಟ್ಟಿನ ಕ್ರಮಕೈಗೊಳ್ಳುವ ಮುಖಾಂತರ ರೋಗ ಹರಡುವುದನ್ನು ನಿಯಂತ್ರಿಸುವುದರಲ್ಲಿ ಸಫಲವಾಗಿದೆ.