ಹಾಸನ, ಏ15 (Daijiworld News/MSP): ಕೋವಿಡ್-19 ನಿಯಂತ್ರಣಾ ಕ್ರಮವಾಗಿ ಏ. 20 ರ ನಂತರ ಮನೆಯಿಂದ ಹೊರಬರುವ ಪ್ರತಿಯೊಬ್ಬರೂ ಕಡ್ಡಾಯವಾಗಿ ಮಾಸ್ಕ್ ಧರಿಸಲೇಬೇಕು. ಸಾರ್ವಜನಿಕರು ಮಾಸ್ಕ್ ಧರಿಸದೆ ಹೊರಗಡೆ ಬಂದರೆ ಅಪರಾಧ ಎಂದು ಪರಿಗಣಿಸಲಾಗುತ್ತದೆ ಎಂಬ ಕಾನೂನು ಸಂಸದೀಯ ವ್ಯವಹಾರಗಳ ಸಚಿವ ಜೆ.ಸಿ ಮಾಧುಸ್ವಾಮಿ ಅವರ ಹೇಳಿಕೆಗೆ ಶಾಸಕ ಎಚ್.ಡಿ. ರೇವಣ್ಣ ತಿರುಗೇಟು ನೀಡಿದ್ದು, ಏನೇ ಆಗಲಿ ನಾನು ಮಾಸ್ಕ್ ಧರಿಸುವುದಿಲ್ಲ. ಬೇಕಿದ್ರೆ ನನ್ನನ್ನು ಅರೆಸ್ಟ್ ಮಾಡಿಸಿ ಎಂದು ಸವಾಲು ಹಾಕಿದ್ದಾರೆ.
ಹಾಸನದಲ್ಲಿ ಅಧಿಕಾರಿಗಳು ಮತ್ತು ಪೊಲೀಸರ ಜೊತೆ ಸಭೆ ಸಚಿವ ಮಾಧುಸ್ವಾಮಿ , ಏ.20 ರವರೆಗೆ ಕಟ್ಟುನಿಟ್ಟಾಗಿ ಲಾಕ್ ಡೌನ್ ನಿಯಮಗಳನ್ನು ಪಾಲಿಸಬೇಕೆಂದು ಹೇಳಿದರಲ್ಲದೆ, ಸಾರ್ವಜನಿಕರು ಮನೆಯಲ್ಲೇ ತಯಾರಿಸಿದ ಮಾಸ್ಕ್ ಅಥವಾ ಕರವಸ್ತ್ರ, ಟವೆಲ್, ದುಪ್ಪಟ್ಟಗಳಿಂದ ಮೂಗು ಮತ್ತು ಬಾಯಿ ಮುಚ್ಚಿಕೊಂಡು ಅಗತ್ಯವಿದ್ದಾಗ ರಸ್ತೆಗೆ ಬರಬೇಕು ಮಾಸ್ಕ್ ಧರಿಸದೆ ಹೊರಗೆ ಬಂದರೆ ಅಪರಾಧವಾಗುತ್ತದೆ , ಅಂಥವರನ್ನು ಬಂಧಿಸಿ ಎಂದು ಹೇಳಿದ್ದರು.
ಇದಕ್ಕೆ ತಿರುಗೇಟು ನೀಡಿದ ಎಚ್.ಡಿ. ರೇವಣ್ಣ , ನಾನು ಮಾಸ್ಕ್ ಹಾಕುವುದಿಲ್ಲ, ಅಪರಾಧವಾದರೆ ನನ್ನನ್ನೂ ಬಂಧಿಸಿ , ಸಚಿವರು ಹೇಳಿದಂತೆ ಜೈಲಿಗೆ ಹಾಕಲಿ. ಜೈಲಿನಲ್ಲಾದರೂ ಊಟ ಸಿಗುತ್ತದೆ. ಕೊರೋನಾದಿಂದಾಗಿ ಹೊರಗಡೆ ಸರಿಯಾಗಿ ಊಟವೂ ಸಿಗುತ್ತಿಲ್ಲ. ಜೈಲಿನಲ್ಲಾದರೂ ಊಟ ಸಿಗುತ್ತದೆ.