ಭೋಪಾಲ್, ಎ.16 (DaijiworldNews/PY) : ಲಾಕ್ಡೌನ್ನಿಂದ ಮದ್ಯ ದೊರಕದೆ ಕಂಗೆಟ್ಟಿದ್ದ ಕುಡುಕನೋರ್ವ ಬಿಯರ್ ಬಾಟಲ್ನಲ್ಲಿ ಇರಿಸಿದ್ದ ಆ್ಯಸಿಡ್ ಕುಡಿದು ಮೃತಪಟ್ಟಿರುವ ಘಟನೆ ಮಧ್ಯಪ್ರದೇಶದ ಭೋಪಾಲ್ನಲ್ಲಿ ನಡೆದಿದೆ.
ಆ್ಯಸಿಡ್ ಕುಡಿದು ಸಾವನ್ನಪ್ಪಿದ್ದ ವ್ಯಕ್ತಿಯನ್ನು ಭೋಪಾಲ್ನ ಚಕ್ಕಿ ಕ್ರಾಸಿಂಗ್ ನಿವಾಸಿ ಸುರೇಶ್ ಸಜಲ್ಕರ್(50) ಎಂದು ಗುರುತಿಸಲಾಗಿದೆ. ಲಾಕ್ಡೌನ್ ಜಾರಿ ಹಿನ್ನೆಲೆ ಮದ್ಯ ಮಾರಾಟವನ್ನು ನಿರ್ಬಂಧಿಸಲಾಗಿತ್ತು. ಹಾಗಾಗಿ ಮದ್ಯ ಸಿಗದೇ ಮದ್ಯಪಾನ ವ್ಯಸನಿಗಳು ಕಂಗೆಟ್ಟಿದ್ದಾರೆ. ಸುರೇಶ್ ಕೂಡಾ ಮದ್ಯ ದೊರಕದೇ ಹತಾಶರಾಗಿದ್ದರು. ಈ ಸಂದರ್ಭ ಬಾಟಲಿ ಕಂಡೊಡನೆ ಸಂತೋಷದಿಂದ ಅದರಲ್ಲೇನಿದೆ ಎನ್ನುವುದನ್ನು ನೋಡದೇ ಬಾಟಲಿ ತೆಗೆದುಕೊಂಡು ಕುಡಿದಿದ್ದಾರೆ. ಕುಡಿದ ನಂತರ ಬಾಟಲಿಯಲ್ಲಿ ಆ್ಯಸಿಡ್ ಇದೆ ಎಂದು ಗೊತ್ತಾಗಿದ್ದು, ಆ್ಯಸಿಡ್ ಕುಡಿದ ನಂತರ ಆತನ ಸ್ಥಿತಿ ಗಂಭೀರವಾಗಿದ್ದು, ಆತನನ್ನು ತಕ್ಷಣವೇ ಆಸ್ಪತ್ರೆ ದಾಖಲಿಸಿ ಚಿಕಿತ್ಸೆ ನೀಡಲಾಯಿತು.
ಸುರೇಶ್ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾರೆ ಎಂದು ಟಿ.ಟಿ ನಗರ ಪೊಲೀಸ್ ಠಾಣೆಯ ಇನ್ಸ್ಪೆಕ್ಟರ್ ಸಂಜೀವ್ ಚೌಕ್ಸೆ ತಿಳಿಸಿದ್ದಾರೆ. ಈ ಬಗ್ಗೆ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಮಂಗಳವಾರ ಮಧ್ಯಪ್ರದೇಶದ ಸಿಎಂ ಶಿವರಾಜ್ ಚೌಹಾನ್ ಅವರು ಪ್ರಕಟಣೆ ಹೊರಡಿಸಿ, ಕೊರೊನಾ ಲಾಕ್ಡೌನ್ ವಿಸ್ತರಣೆಯಾದ ಕಾರಣ ಮೇ.3ರವರೆಗೆ ರಾಜ್ಯದಲ್ಲಿ ಮಾಲ್ಗಳು ಹಾಗೂ ಸಿನಿಮಾ ಹಾಲ್ಗಳು ತೆರೆಯುವುದಿಲ್ಲ. ಆದರೆ, ಮದ್ಯದಂಗಡಿ ಎ.20ರ ಬಳಿಕ ತೆರೆಯುತ್ತದೆ ಎಂದು ಹೇಳಿದ್ದರು.