ಮುಂಬೈ, ಎ.17 (DaijiworldNews/PY) : ಮಣಿಪುರ್ ಮಹಿಳೆಯೊಬ್ಬರ ಮೇಲೆ ಸುಮಾರು ಹತ್ತು ದಿನಗಳ ಹಿಂದೆ ಉಗುಳಿದ ಆರೋಪದ ಹಿನ್ನೆಲೆಯಲ್ಲಿ ಹಿನ್ನೆಲೆಯಲ್ಲಿ 29 ವರ್ಷದ ಯುವಕನನ್ನು ಮುಂಬೈ ಸಬ್ ಅರ್ಬನ್ ವಾಕೋಲಾ ಪೊಲೀಸರು ಬಂಧಿಸಿರುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ.
ಬಂಧಿತ ಯುವಕನನ್ನು ಕುರ್ಲಾ ನಿವಾಸಿ ಅಮೀರ್ ಖಾನ್ ಎಂದು ಗುರುತಿಸಲಾಗಿದೆ. ಎ.6ರಂದು ಕೊರೊನಾ ಲಾಕ್ಡೌನ್ ಹಿನ್ನೆಲೆ ಸಾಂತಾ ಕ್ರೂಝ್ನಲ್ಲಿನ ಕಾಲಿನಾ ಮಿಲಿಟರಿ ಕ್ಯಾಂಪ್ನಲ್ಲಿ ದಿನಸಿ ಸಾಮಾನು ಹಾಗೂ ತುರ್ತು ಅಗತ್ಯವಾದ ವಸ್ತುಗಳನ್ನು ನೀಡಲಾಗುತ್ತಿತ್ತು. ಈ ಸಂದರ್ಭ ವಿಹಾರ್ ಜಂಕ್ಷನ್ನಲ್ಲಿ 30 ವರ್ಷದ ಮಹಿಳೆ ಗೀತಾ ನಡೆದುಕೊಂಡು ಹೋಗುತ್ತಿದ್ದಳು ಎಂದು ವರದಿ ಹೇಳಿದೆ.
ಈ ಸಮಯ ಬೈಕ್ನಲ್ಲಿ ಬಂದ ವ್ಯಕ್ತಿ ತಕ್ಷಣವೇ ಬೈಕ್ ಸ್ಲೋ ಮಾಡಿ ಮೈಮೇಲೆ ಉಗುಳಿರುವುದಾಗಿ ಮಹಿಳೆ ಆರೋಪಿಸಿದ್ದಾಳೆ. ಪೊಲೀಸರು ಸಿಸಿಟಿವಿ ಫೂಟೇಜ್ ಸಹಾಯದೊಂದಿಗೆ ಆರೋಪಿಯನ್ನು ಪತ್ತೆಹಚ್ಚಿದ್ದರು. ಆರೋಪಿ ಸೇಲ್ಸ್ ಮ್ಯಾನ್ ಆಗಿದ್ದು, ಆತನನ್ನು ಬಂಧಿಸಲಾಗಿದೆ ಎಂದು ಪೊಲೀಸ್ ಕಮಿಷನರ್ ಮಂಜುನಾಥ್ ಸಿಂಘೆ ತಿಳಿದ್ದಾರೆ.