ನವದೆಹಲಿ, ಎ.17 (DaijiworldNews/PY) : ಭಾರತವು ಮಹಾಮಾರಿ ಕೊರೊನಾ ವಿರುದ್ದ ಹೋರಾಡುತ್ತಿದ್ದು, ಇದರೊಂದಿಗೆ ವಿವಿಧ ದೇಶಗಳಿಗೂ ಸಹಾಯ ಮಾಡುತ್ತಿದೆ. ಈ ನಡುವೆ ಪಾಕಿಸ್ತಾನ ಮಾತ್ರ ತನ್ನ ಪುಂಡಾಟವನ್ನು ನಡೆಸುತ್ತಿದೆ ಎಂದು ಆರ್ಮಿ ಮುಖ್ಯಸ್ಥ ಜನರಲ್ ಮನೋಜ್ ಮುಕುಂದ್ ನರವಾಣೆ ಹೇಳಿದ್ದಾರೆ.
ನವರಾಣೆ ಅವರ ಹೇಳಿಕೆಗಿಂದ ಕೆಲವೇ ಗಂಟೆಗಳ ಮೊದಲು ಜಮ್ಮು-ಕಾಶ್ಮೀರದ ಪೂಂಚ್ ಜಿಲ್ಲೆಯ ನಿಯಂತ್ರಣ ರೇಖೆಯಲ್ಲಿ ಪಾಕಿಸ್ತಾನ ಸೇನೆಯು ಅಪ್ರಚೋದಿತ ದನ ವಿರಾಮ ಉಲ್ಲಂಘನೆಗೆ ಪ್ರಯತ್ನಿದ್ದು ಅಲ್ಲದೇ, ಕಸ್ಬಾ ಹಾಗೂ ಕಿರ್ನ್ ವಲಯಗಳಲ್ಲಿನ ಎಲ್ಒಸಿ ಉದ್ದಕ್ಕೂ ಸಣ್ಣ ಶಸ್ತ್ರಾಸ್ತ್ರಗಳಿಂದ ಗುಂಡು ಹಾರಿಸಿದೆ.
ಕುಪ್ವಾರಾದಲ್ಲಿ ಮಾತನಾಡಿದ ಆರ್ಮಿ ಮುಖ್ಯಸ್ಥ ಜನರಲ್ ನರವಾಣೆ ಅವರು, ನಾವು ವೈದ್ಯಕೀಯ ತಂಡ, ಔಷಧಿಗಳನ್ನು ನಮ್ಮ ನಾಗರಿಕರಿಗೆ ಮಾತ್ರವಲ್ಲದೇ ಇತರ ಭಾಗಗಳಿಗೆ ರಫ್ತು ಮಾಡಿ ಕೊರೊನಾ ವಿರುದ್ದ ಹೋರಾಟ ನಡೆಸುತ್ತಿದ್ದೇವೆ. ಆದರೆ, ಪಾಕಿಸ್ತಾನ ಮಾತ್ರ ಭಾಯೋತ್ಪನೆಯನ್ನು ರಫ್ತು ಮಾಡುತ್ತಿದೆ. ಇದು ಉತ್ತಂವಾದ ಬೆಳವಣಿಗೆಯಾಗಿಲ್ಲ ಎಂದು ತಿಳಿಸಿದರು.
ಭಾರತೀಯ ಸೈನ್ಯದಲ್ಲಿ ಇಲ್ಲಿಯವರೆಗೆ ಕೇವಲ 8 ಜನರಿಗೆ ಕೊರೊನಾ ಸೋಂಕು ತಗುಲಿದ್ದು, ಅವರಲ್ಲಿ ಅವರಲ್ಲಿ 2 ವೈದ್ಯರು ಹಾಗೂ 1 ನರ್ಸಿಂಗ್ ಸಹಾಯಕ, 4 ಜನರು ಚಿಕಿತ್ಸೆಗೆ ಉತ್ತಮವಾಗಿ ಸ್ಪಂದಿಸುತ್ತಿದ್ದಾರೆ. ಲಡಾಖ್ನಲ್ಲಿ ಒಬ್ಬರಿಗೆ ಸೋಂಕು ತಗುಲಿತ್ತು ಅವರು ಸಂಪೂರ್ಣವಾಗಿ ಗುಣಮುಖರಾಗಿದ್ದು, ಕರ್ತವ್ಯಕ್ಕೆ ಹಾಜರಾಗಿದ್ದಾರೆ ಎಂದರು.
ಯಾವುದೇ ಕೊರೊನಾ ಸೋಂಕಿತ ವ್ಯಕ್ತಿಯೊಂದಿಗೆ ಸಂಪರ್ಕ ಹೊಂದಿರದ ಯೋಧರನ್ನು ಪುನಃ ಘಟಕಗಳಿಗೆ ಕರೆದೊಯ್ಯಲಾಗುತ್ತಿದೆ. ಈಗಾಗಲೇ ನಾವು ಎರಡು ವಿಶೇಷ ರೈಲುಗಳನ್ನು ನೀಡಿದ್ದೇವೆ. ಬೆಂಗಳೂರಿನಿಂದ ಜಮ್ಮು ಹಾಗೂ ಬೆಂಗಳೂರಿನಿಂದ ಗುವಾಹಟಿಗೆ ರೈಲು ಸೇವೆ ಒದಗಿಸಲಾಗಿದ್ದು. ಯೋಧರನ್ನು ಅಲ್ಲಿಂದ ಕರೆತರಲಾಗುತ್ತಿದೆ ಎಂದು ತಿಳಿಸಿದರು.
ಈ ವಿಚಾರವಾಗಿ ಮಾತನಾಡಿದ ರಕ್ಷಣಾ ಸಚಿವಾಲಯದ ವಕ್ತಾರ ಕರ್ನಲ್ ದೇವೇಂದರ್ ಆನಂದ್ ಅವರು, ಪಾಕಿಸ್ತಾನವು ಇಂದು ಬೆಳಗ್ಗೆ 11 ಗಂಟೆಗೆ ಕಸ್ಬಾ ಹಾಗೂ ಕಿರ್ನಿ ವಲಯಗಳಲ್ಲಿನ ಗಡಿ ನಿಯಂತ್ರಣ ರೇಖೆಯ ಉದ್ದಕ್ಕೂ ಸಣ್ಣ ಶಸ್ತ್ರಾಸ್ತ್ರಗಳಿಂದ ಗುಂಡು ಹಾರಿಸಿದ್ದು ಅಲ್ಲದೇ, ಅಪ್ರಚೋದಿತ ಕದನ ವಿರಾಮ ಉಲ್ಲಂಘನೆ ಮಾಡಿದೆ. ಭಾರತೀಯ ಸೇನೆಯು ಇದಕ್ಕೆ ಸೂಕ್ತವಾದ ಪ್ರತೀಕಾರ ತೀರಿಸುತ್ತದೆ ಎಂದರು.