ಬೆಂಗಳೂರು, ಎ.18 (Daijiworld News/MB) : ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಅವರು ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಅವರ ಪುತ್ರ ನಿಖಿಲ್ ಕುಮಾರಸ್ವಾಮಿ ವಿವಾಹಕ್ಕೆ ಶುಭಕೋರಿದ್ದು ಇದೀಗ ಆ ಟ್ವೀಟ್ ಹಾಗೂ ಫೇಸ್ಬುಕ್ ಪೋಸ್ಟ್ಗಳು ಡಿಲೀಟ್ ಮಾಡಲಾಗಿದೆ.
ಶುಕ್ರವಾರ ರಾಮನಗರ ಜಿಲ್ಲೆಯ ಬಿಡದಿಯ ಕೇತನಾಗಹಳ್ಳಿಯ ಕುಮಾರಸ್ವಾಮಿಯವರ ತೋಟದ ಮನೆಯಲ್ಲಿ ನಿಖಿಲ್ ಹಾಗೂ ರೇವತಿ ವಿವಾಹವು ನಡೆದಿದ್ದು ಇದಕ್ಕೆ ಶುಭಕೋರಿದ್ದ ಮುಖ್ಯಮಂತ್ರಿ ಯಡಿಯೂರಪ್ಪ ಮಧ್ಯಾಹ್ಮ ಸುಮಾರು ೧೨ : ೫೯ ಗಂಟೆಗೆ "ವೈವಾಹಿಕ ಜೀವನಕ್ಕ ಕಾಲಿಟ್ಟಿರುವ ನಿಖಿಲ್ ಕುಮಾರಸ್ವಾಮಿ ಹಾಗೂ ರೇವತಿ ದಂಪತಿಗೆ ಶುಭಾಷಯಗಳು. ಇವರ ದಾಂಪತ್ಯ ಜೀವನವು ಸುಖಮಯವಾಗಿರಲಿ ಎಂದು ಹಾರೈಸುತ್ತೇನೆ ಎಂದು" ಟ್ವೀಟ್ ಮಾಡಿದ್ದರು.
ಆದರೆ ಸಂಜೆ ವೇಳೆಗೆ ಫೇಸ್ಬುಕ್ ಹಾಗೂ ಟ್ವೀಟರ್ ಎರಡರ ಪೋಸ್ಟ್ಗಳನ್ನು ಡಿಲೀಟ್ ಮಾಡಲಾಗಿದೆ.
ಈ ವಿವಾಹವು ಕೆಲವೇ ಜನರ ಉಪಸ್ಥಿತಿಯಲ್ಲಿ ನಡೆದಿದ್ದು ಸರಳವಾಗಿ ನಡೆದಿದೆ.