ನವದೆಹಲಿ, ಏ18 (Daijiworld News/MSP): : ಸರ್ಕಾರ ಇನ್ನೇನು ವೈನ್ ಶಾಪ್ ತೆರೆಯಲು ಅನುಮತಿ ನೀಡಬಹುದು ಎಂದು ಆಶಾವಾದದಲ್ಲಿದ್ದ ಕುಡುಕರಿಗೆ ನಿರಾಶೆಯಾಗಿದೆ. ಯಾಕೆಂದರೆ ದೇಶಾದ್ಯಂತ ಲಾಕ್ ಡೌನ್ ಜಾರಿಯಲ್ಲಿರುವವರೆಗೆ ಮದ್ಯ ಮಾರಾಟಕ್ಕೆ ಅವಕಾಶ ಇಲ್ಲ ಎಂದು ಕೇಂದ್ರ ಹೇಳಿದೆ.
ವಿಶ್ವ ಆರೋಗ್ಯ ಸಂಸ್ಥೆಯ ಮಾರ್ಗಸೂಚಿಯಂತೆ ಅಲ್ಕೋಹಾಲ್ ಸೇವನೆಯಿಂದ ವ್ಯಕ್ತಿಯಲ್ಲಿ ರೋಗ ನಿರೋಧಕ ಶಕ್ತಿ ಕುಸಿಯಲಿದೆ. ಸದ್ಯ ಕೊರೊನಾ ಬಾಧೆ ದೇಶದೆಲ್ಲೆಡೆ ಇರುವುದರಿಂದ ಒಂದು ವೇಳೇ ಮದ್ಯ ಮಾರಾಟಕ್ಕೆ ಅವಕಾಶ ನೀಡಿದರೆ ಮದ್ಯ ಪ್ರಿಯರ ಆರೋಗ್ಯದ ಮೇಲೆ ದುಷ್ಪರಿಣಾಮವಾಗುವ ಸಾಧ್ಯತೆ ಇದೆ. ಇದರೊಂದಿಗೆ ರೋಗ ನಿರೋಧಕ ಶಕ್ತಿ ಕುಸಿಯುವುದರಿಂದ ಕೊರೊನಾ ಸೋಂಕು ಕೂಡ ಹರಡುವ ಸಾಧ್ಯತೆ ಹೆಚ್ಚಾಗುವ ಸಂಭವವಿದೆ. ಮದ್ಯ ಮಾರಾಟಕ್ಕೆ ಅವಕಾಶ ನೀಡಿದರೆ ಸಾಮಾಜಿಕ ಅಂತರ ನಿಯಮ ಉಲ್ಲಂಘನೆಯಾಗುವ ಸಾಧ್ಯತೆಯೂ ಇದೆ. ಈ ಎಲ್ಲ ಅಂಶಗಳನ್ನು ಪರಿಗಣಿಸಿ ಕೇಂದ್ರ ಸರ್ಕಾರ ಮೇ.3ರ ಬಳಿಕವೂ ಮದ್ಯ ಮಾರಾಟಕ್ಕೆ ಅವಕಾಶ ನೀಡುವ ಅನುಮಾನ ವ್ಯಕ್ತವಾಗಿದೆ.
ಈಗಾಗಲೇ ಮದ್ಯ ಸಿಗದೆ ಹಲವು ಕುಡುಕರು ಪ್ರಾಣ ಕಳೆದುಕೊಂಡಿದ್ದಾರೆ. ಇನ್ನು ಕೆಲವೆಡೆ ವೈನ್ ಶಾಪ್ ಗಳಿಗೆ ಕನ್ನ ಹಾಕಿದ್ದಾರೆ. ಒಂದು ವೇಳೆ ಮೇ.3ರ ತನಕ ಮದ್ಯ ಸಿಗದೇ ಇದ್ದರೆ ಕುಡುಕರು ಇನ್ನೇನು ಅವಾಂತರ ಸೃಷ್ಟಿಸಲಿದ್ದಾರೆಯೋ ಎನ್ನುವ ಪ್ರಶ್ನೆ ಕಾಡತೊಡಗಿದೆ.