ಮುಂಬೈ, ಏ18 (Daijiworld News/MSP): ಭಾರತೀಯ ನೌಕಾಪಡೆಗೂ ಕೊರೊನಾ ಭೀತಿ ಕಾಡತೊಡಗಿದೆ. ಮುಂಬೈನಲ್ಲಿ ನೌಕಾಪಡೆಯ ಸುಮಾರು 20 ಮಂದಿ ಸಿಬ್ಬಂದಿಗಳಲ್ಲಿ ಕೋವಿಡ್-೧೯ ಇರುವುದು ದೃಢಪಟ್ಟಿದೆ ಎಂದು ವರದಿಯಾಗಿದೆ.
ನೌಕಾಪಡೆಯಲ್ಲಿ ಕೊರೊನಾ ವರದಿಯಾಗುತ್ತಿರುವ ಮೊದಲ ಪ್ರಕರಣ ಇದಾಗಿದ್ದು, ಸಧ್ಯ ಇವರನ್ನೆಲ್ಲಾ ಮುಂಬೈನ ನೌಕಾಪಡೆ ಆಸ್ಪತ್ರೆಯಲ್ಲಿ ಕ್ವಾರಂಟೈನ್ ಮಾಡಲಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಸೋಂಕು ಪತ್ತೆಯಾಗಿರುವ ನೌಕಾಪಡೆಯ ಸಿಬ್ಬಂದಿಗಳು ಐಎನ್ಎಸ್ ಆಂಗ್ರೆಯಲ್ಲಿ ನೀಡಲಾಗಿದ್ದ ವಸತಿಗೃಹದಲ್ಲಿ ತಂಗಿದ್ದರು ಎಂದು ತಿಳಿದುಬಂದಿದೆ. ನೌಕಾಪಡೆಯ ಸಿಬ್ಬಂದಿ ಸಂಚರಿಸಿದ ಕಡೆಗಳಲ್ಲಿ ಸೋಂಕು ಹರಡಿರುವ ಸಾಧ್ಯತೆ ಇದೆ.ಇದೀಗ ಸೋಂಕು ಪತ್ತೆಯಾಗಿರುವ ಸಿಬ್ಬಂದಿಗಳೊಂದಿಗೆ ಸಂಪರ್ಕ ಹೊಂದಿದ್ದವರಿಗಾಗಿ ಕಾರ್ಯಾಚರಣೆ ಆರಂಭವಾಗಿದೆ