ಭೋಪಾಲ್ , ಏ18 (Daijiworld News/MSP): ಲಾಕ್ ಡೌನ್ ನಂತಹ ಪರಿಸ್ಥಿತಿಯಲ್ಲಿ ದುಷ್ಕರ್ಮಿಯೊಬ್ಬ 53 ವರ್ಷದ ದೃಷ್ಟಿಹೀನ ಮಹಿಳೆಯೊಬ್ಬಳ ಮನೆಗೆ ನುಗ್ಗಿ ಆಕೆಯನ್ನು ಅತ್ಯಾಚಾರಗೈದ ಘಟನೆ ಬೆಳಕಿಗೆ ಬಂದಿದೆ.
ಭೋಪಾಲ್ನ ಶಹಪುರ ಪ್ರದೇಶದಲ್ಲಿಈ ಘಟನೆ ನಡೆದಿದ್ದು, ಮಹಿಳೆ ಮನೆಯಲ್ಲಿ ಒಬ್ಬಂಟಿಯಾಗಿದ್ದ ಸಮಯದಲ್ಲಿ ನಸುಕಿನ ಜಾವ ಅಪರಿಚಿತ ದುಷ್ಕರ್ಮಿ ಹೀನ ಕೃತ್ಯ ಎಸಗಿದ್ದಾನೆ.
ಬ್ಯಾಂಕ್ ವ್ಯವಸ್ಥಾಪಕಿಯಾಗಿರುವ ಮಹಿಳೆಯ ಪತಿ ಮತ್ತು ಕುಟುಂಬ ಲಾಕ್ ಡೌನ್ ನಿಂದಾಗಿ ರಾಜಸ್ಥಾನದಲ್ಲಿ ಸಿಲುಕಿಕೊಂಡಿತ್ತು. ಮೂರು ಮಹಡಿಯನ್ನು ಹೊಂದಿರುವ ಅಪಾರ್ಟ್ ಮೆಂಟ್ ನ ಎರಡನೇ ಮಹಡಿಯಲ್ಲಿ ಮಹಿಳೆ ವಾಸಿಸುತ್ತಿದ್ದರು.
ಸಂತ್ರಸ್ತೆಯ ದೂರಿನ ಪ್ರಕಾರ, ನಸುಕಿನ ಜಾವ 3.30ರ ಸುಮಾರಿಗೆ ಮಹಿಳೆ ಸೆಕೆಯಾಗುತ್ತಿದೆ ಎಂದು ಬಾಲ್ಕನಿಯ ಬಾಗಿಲುಗಳನ್ನು ತೆರೆದಿಟ್ಟು ಮಲಗಿದ್ದರು. ಸ್ವಲ್ಪ ಸಮಯದ ಬಳಿಕ ಒಳನುಗ್ಗಿದ ಅಪರಿಚಿತ ವ್ಯಕ್ತಿ ಆಕೆಯ ಮೇಲೆ ಅತ್ಯಾಚಾರವೆಸಗಿದ್ದಾನೆ. ಆರೋಪಿ ಫ್ಲ್ಯಾಟ್ ನ ಮುಖ್ಯ ಬಾಗಿಲನ್ನು ಹೊರಗಿನಿಂದ ಬಂದ್ ಮಾಡಿ ಆಕೆಯ ಮೊಬೈಲ್ ನ್ನು ಕಸಿದುಕೊಂಡಿದ್ದ.
ಪ್ರಸ್ತುತ, ಪೊಲೀಸರಿಗೆ ಆರೋಪಿಗಳ ಬಗ್ಗೆ ಯಾವುದೇ ಸುಳಿವು ದೊರಕಿಲ್ಲ. ಶಾಪುರ ಪೊಲೀಸ್ ಠಾಣೆಯಲ್ಲಿ ಅಪರಿಚಿತ ಆರೋಪಿಯ ವಿರುದ್ಧ ದೂರು ದಾಖಲಾಗಿದೆ.