ಕೇರಳ, ಎ.18 (DaijiworldNews/PY) : ಕೊರೊನಾ ಸೋಂಕಿನಿಂದ ಗುಣಮುಖರಾದ ಮಲಪ್ಪುರಂ ನಿವಾಸಿ ವೀರನ್ಕುಟ್ಟಿ (85) ಕೊರೊನಾ ಸೋಂಕಿನಿಂದ ಮೃತಪಟ್ಟಿಲ್ಲ ಎಂದು ಕೇರಳ ಆರೋಗ್ಯ ಸಚಿವೆ ಕೆ.ಕೆ.ಶೈಲಜಾ ಅವರು ಖಚಿತಪಡಿಸಿದ್ದಾರೆ.
ವೀರನ್ಕುಟ್ಟಿ ಅವರು ಕೊರೊನಾ ಸೋಂಕಿನಿಂದ ಗುಣಮುಖರಾದ ನಂತರ ಮಂಜೇರಿ ವೈದ್ಯಕೀಯ ಕಾಲೇಜಿನಲ್ಲಿ ನಿಗಾದಲ್ಲಿದ್ದ ಅವರು ಶನಿವಾರ ನಿಧನರಾಗಿದ್ದರು.
ಈ ಬಗ್ಗೆ ತಿರುವನಂತಪುರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ವೀರನ್ಕುಟ್ಟಿ ಅವರು ಮೃತಪಟ್ಟಿದ್ದು ಕೊರೊನಾ ಸೋಂಕಿನಿಂದಲ್ಲ ಎಂದು ಖಚಿತಪಡಿಸಿದ್ದಾರೆ. ಅವರು ಕೊರೊನಾ ಸೋಂಕಿನಿಂದ ಗುಣಮುಖರಾಗಿದ್ದರು. ಪರೀಕ್ಷೆಗೆ ಕಳುಹಿಸಿದ್ದ ಮೂರು ವರದಿಗಳು ಸಹ ನೆಗೆಟಿವ್ ಬಂದಿವೆ. ಕೊನೆಯ ಪರೀಕ್ಷೆಯನ್ನು ಮೂರು ದಿನಗಳ ಹಿಂದೆ ಮಾಡಲಾಯಿತು. ಹಾಗಾಗಿ ಅವರು ಕೊರೊನಾ ಸೋಂಕಿನಿಂದ ಮೃತಪಟ್ಟಿಲ್ಲ ಎಂದು ತಿಳಿಸಿದ್ದಾರೆ.
ವೀರನ್ಕುಟ್ಟಿ ಅವರು ದೀರ್ಘಕಾಲದಿಂದ ಹೃದಯ ಹಾಗೂ ಮೂತ್ರಪಿಂಡದ ಕಾಯಿಲೆಗೆ ಚಿಕಿತ್ಸೆ ಪಡೆಯುತ್ತಿದ್ದರು. ಎ.13ರಂದು ಅವರಿಗೆ ಹೃದಯ ಸ್ತಂಭನವಾಗಿತ್ತು. ಒಂದು ದಿನದ ನಂತರ ಅವರು ಮೂತ್ರಪಿಂಡ, ವೈಫಲ್ಯದಿಂದ ಬಳಲುತ್ತಿದ್ದು, ಡಯಾಲಿಸಿಸ್ನಲ್ಲಿದ್ದರು. ಎಂದು ತಿಳಿಸಿದರು.
ವೀರನ್ಕುಟ್ಟಿ ಅವರ ಶವವನ್ನು ಸಂಬಂಧಿಕರಿಗೆ ಹಸ್ತಾಂತರಿಸಲಾಗುವುದು ಎಂದು ಹೇಳಿದರು.
ವೀರನ್ಕುಟ್ಟಿ ಅವರು ವಿಶ್ವಾಸಾರ್ಹ ವೈದ್ಯರಾಗಿದ್ದು, ಅವರನ್ನು ಭೇಟಿ ಮಾಡಲು ಅನೇಕ ಜನರು ಬರುತ್ತಿದ್ದರು.
ಕೇರಳದಲ್ಲಿ ಈವರೆಗೆ ಕೊರೊನಾ ಸೋಂಕಿನಿಂದ ಯಾಕೂಬ್ ಹುಸೈನ್ ಸೈತ್ (69 ವರ್ಷ, ಎರ್ನಾಕುಲಂ), ಅಬ್ದುಲ್ ಅಜೀಜ್ (68 ವರ್ಷ, ತಿರುವನಂತಪುರಂ), ಮೆಹ್ರೂಫ್ (67, ಮಹೇ, ಪುದುಚೇರಿಯ ಯುಟಿ) ಮೃತಪಟ್ಟಿದ್ದಾರೆ. ಮಹ್ರೂಫ್ ಕೇಂದ್ರ ಪ್ರದೇಶದ ಪುದುಚೇರಿಯ ಮಾಹೇ ಮೂಲದವರಾಗಿದ್ದು, ಕಣ್ಣೂರಿನ ವೈದ್ಯಕೀಯ ಕಾಲೇಜು ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ.