ಬೆಂಗಳೂರು, ಎ.18 (Daijiworld News/MB) : ರಾಜ್ಯದಾದ್ಯಂತ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಲ್ಲೇ ಇದ್ದು ಶುಕ್ರವಾರ ಸಂಜೆ 5 ರಿಂದ ಶನಿವಾರ ಮಧ್ಯಾಹ್ನ 12 ಗಂಟೆವರೆಗೆ 12 ಹೊಸ ಪ್ರಕರಣಗಳು ಪತ್ತೆಯಾಗಿದೆ. ಇದೀಗ ರಾಜ್ಯದಲ್ಲಿ ಸೋಂಕಿತರ ಸಂಖ್ಯೆ 371ಕ್ಕೆ ಏರಿಕೆಯಾಗಿದೆ.
ರಾಜ್ಯದಲ್ಲಿ ಕೊರೊನಾಗೆ ಒಟ್ಟು 13 ಜನರು ಬಲಿಯಾಗಿದ್ದು 92 ಜನರು ಗುಣಮುಖರಾಗಿದ್ದಾರೆ.
ಕಲಬುರಗಿಯಲ್ಲಿ 34 ವರ್ಷಗಳ ಪುರುಷ ಹಾಗೂ 16 ವರ್ಷದ ಬಾಲಕನಿಗೆ, ಮೈಸೂರಿನಲ್ಲಿ ಮೂವರಿಗೆ ಸೋಂಕು ದೃಢಪಟ್ಟಿದೆ. ಇದರಲ್ಲಿ ಇಬ್ಬರು ನಂಜನಗೂಡಿನ ಔಷಧ ಕಾರ್ಖಾನೆಯ ಮೊದಲ ಸೋಂಕಿತ ವ್ಯಕ್ತಿಯ ಸಂಪರ್ಕಕ್ಕೆ ಬಂದಿದ್ದರು ಎಂದು ತಿಳಿದು ಬಂದಿದೆ. ಉಳಿದಂತೆ ಬಾಗಲಕೋಟೆಯಲ್ಲಿ ಇಬ್ಬರು, ಮಂಡ್ಯ, ವಿಜಯಪುರ, ಹುಬ್ಬಳ್ಳಿ, ಬೆಳಗಾವಿ, ಗದಗದಲ್ಲಿ ತಲಾ ಒಬ್ಬರಿಗೆ ಸೋಂಕು ತಗುಲಿರುವುದು ದೃಢಪಟ್ಟಿದೆ.
ಬೆಂಗಳೂರು ನಗರ 86 ಪ್ರಕರಣಗಳಿಂದ ಮೊದಲ ಸ್ಥಾನದಲ್ಲಿದ್ದು ಮೈಸೂರು 76 ಹೊಂದಿದ್ದು ಎರಡನೇ ಸ್ಥಾನ, ಬೆಳಗಾವಿ 42 ಪ್ರಕರಣಗಳಿಂದ ಮೂರನೇ ಸ್ಥಾನದಲ್ಲಿದೆ.