ಬೆಂಗಳೂರು,ಏ18 (Daijiworld News/MSP): ದುಬೈನಲ್ಲಿರುವ ಎಲ್ಲಾ ಕನ್ನಡಿಗರನ್ನು ರಕ್ಷಣೆ ಮಾಡುತ್ತೇವೆ. ಧೈರ್ಯವಾಗಿರಿ, ಸುರಕ್ಷಿತವಾಗಿ, ಯಾರು ಆತಂಕಕ್ಕೆ ಒಳಗಾಗುವ ಅವಶ್ಯಕತೆ ಇಲ್ಲ ಎಂದು ಗೃಹ ಸಚಿವ ಬಸವರಾಜ್ ಬೊಮ್ಮಾಯಿ ದುಬೈ ಕನ್ನಡಿಗರಿಗೆ ಧೈರ್ಯ ಹೇಳಿದ್ದಾರೆ.
ದುಬೈನಲ್ಲಿ ಸಿಲುಕಿಕೊಂಡಿರುವ ಕನ್ನಡಿಗರ ಜೊತೆ ಇಂದು ಗೃಹ ಸಚಿವ ಬಸವರಾಜ್ ಬೊಮ್ಮಾಯಿ ವಿಡಿಯೋ ಕಾನ್ಫೆರೆನ್ಸ್ ಮೂಲಕ ಮಾತುಕತೆ ನಡೆಸಿ ಅಭಯ ನೀಡಿದ ಬಳಿಕ ಸುದ್ದಿಗಾರರಿಗೆ ಮಾಹಿತಿ ನೀಡಿದರು.
ರಾಜ್ಯದಲ್ಲಿರು ದುಬೈ ಕನ್ನಡಿಗರ ಕುಟುಂಬದ ಬಗ್ಗೆ ಸರ್ಕಾರ ಕಾಳಜಿವಹಿಸುತ್ತದೆ. ನಿಮ್ಮ ಕುಟುಂಬದವರ ಬಗ್ಗೆ ನೀವು ಚಿಂತಿಸಬೇಡಿ. ನಾವು ಅವರೊಂದಿಗೆ ಇದ್ದೇವೆ ಎಂದು ಅಶ್ವಾಸನೆ ನೀಡಿದರು.
ದುಬೈನಲ್ಲಿರುವ ಕನ್ನಡಿಗ ಉದ್ಯಮಿಗಳು ಕನ್ನಡಿಗ ಕಾರ್ಮಿಕರು, ಕೆಲಸಗಾರರ ಬಗ್ಗೆ ಕಾಳಜಿ ವಹಿಸಿ. ಸರ್ಕಾರ ಯಾವತ್ತೂ ನಿಮ್ಮೊಂದಿಗೆ ಇರುತ್ತದೆ. ಸರ್ಕಾರದ ಜೊತೆ ನಿಂತು ಸಹಕಾರ ನೀಡಿ ಎಂದು ಕೇಳಿಕೊಂಡಿದ್ದಾರೆ.