ನವದೆಹಲಿ, ಎ.18 (DaijiworldNews/PY) : ಮೇ.4ರಂದು ದೇಶೀಯ ವಿಮಾನಗಳ ಸಂಚಾರವನ್ನು ಪ್ರಾರಂಭಮಾಡುವುದಾಗಿ ಏರ್ ಇಂಡಿಯಾ ತಿಳಿಸಿದೆ.
ಕೊರೊನಾ ಸೋಂಕು ನಿಯಂತ್ರಿಸುವ ನಿಟ್ಟಿನಲ್ಲಿ ವಿಮಾನ ಸಂಚಾರದ ಮೇಲೆ ನಿರ್ಬಂಧ ಹೇರಲಾಗಿತ್ತು. ಅಲ್ಲದೇ, ಮೇ.3ರವರೆಗೆ ಲಾಕ್ಡೌನ್ ವಿಸ್ತರಣೆಯಾದ ಕಾರಣ ಅಲ್ಲಿಯ ತನಕ ಟಿಕೆಟ್ ಬುಕಿಂಗ್ ಅನ್ನು ಏರ್ ಇಂಡಿಯಾ ಸ್ಥಗಿತಗೊಳಿಸಿತ್ತು. ಇದೀಗ ಮೆ.೪ರಂದು ದೇಶೀಯ ಪ್ರಯಾಣಕ್ಕಾಗಿ ಟಿಕೆಟ್ ಬುಕ್ ಮಾಡಬಹುದು ಎಂದು ಸಂಸ್ಥೆಯ ವೆಬ್ಸೈಟ್ನಲ್ಲಿ ಪ್ರಕಟಿಸಲಾಗಿದೆ.
ವಿದೇಶಗಳಿಗೆ ವಿಮಾನ ಸಂಚಾರವನ್ನು ಜೂನ್ 1ರಿಂದ ಪ್ರಾರಂಭಿಸುವುದಾಗಿ ಏರ್ ಇಂಡಿಯಾ ತಿಳಿಸಿದೆ. ಇದೇ ಅವಧಿಯಲ್ಲಿ ಇತರ ಖಾಸಗಿ ವಿಮಾನ ಸಂಸ್ಥೆಗಳು ಕೂಡಾ ವಿಮಾನಯಾನ ಪ್ರಾರಂಭಿಸಲಿದ್ದು, ಟಿಕೆಟ್ ಬುಕಿಂಗ್ ಅನ್ನು ಆರಂಭಿಸಿವೆ.
ಎ.೧೪ರ ನಂತರದ ಪ್ರಯಾಣಕ್ಕಾಗಿ ಕೆಲವು ಸಂಸ್ಥೆಗಳು ಈಗಾಗಲೇ ಮುಂಗಡ ಟಿಕೆಟ್ ಬುಕಿಂಗ್ ಮಾಡಿಸಿಕೊಂಡಿದ್ದವು. ಆದರೆ, ಪುನಃ ಲಾಕ್ಡೌನ್ ವಿಸ್ತರಣೆಯಾದ ಕಾರಣ ಪ್ರಯಾಣಿಕರಿಗೆ ಟಿಕೆಟ್ ಹಣ ಮರಳಿಸುವ ಪ್ರಕಿಯೆ ಪ್ರಾರಂಭಿಸಿವೆ.
ನಾಗರಿಕ ವಿಮಾನ ಸಂಚಾರ ಸ್ಥಗಿತಗೊಂಡಿದ್ದರೂ, ಏರ್ ಇಂಡಿಯಾ ಸೇರಿ ಹಲವು ಸಂಸ್ಥೆಗಳು ವೈದ್ಯಕೀಯ ಹಾಗೂ ಅಗತ್ಯ ವಸ್ತುಗಳನ್ನು ದೇಶದ ವಿವಿಧ ಭಾಗಗಳಿಗೆ ಸಾಗಾಟ ಮಾಡುವ ಕೆಲಸದಲ್ಲಿ ಭಾಗಿಯಾಗಿದ್ದು, ಭಾರತಕ್ಕೆ ಅಗತ್ಯವಾದ ಸಾಮಾಗ್ರಿಗಳನ್ನು ವಿದೇಶಗಳಿಂದಲೂ ತರುವಲ್ಲಿಯೂ ನಿರತವಾಗಿತ್ತು.