ಕೊಲ್ಕತ್ತಾ, ಎ.19 (DaijiworldNews/PY) : ಲಾಕ್ಡೌನ್ ಜಾರಿಯಲ್ಲಿರುವ ಹಿನ್ನೆಲೆ ಅವಶ್ಯಕ ವಸ್ತುಗಳನ್ನು ತರಲು ಮನೆಯಿಂದ ಹೊರ ಹೋಗುವ ವೇಳೆ ಮಾಸ್ಕ್ ಧರಿಸಲು ನಿರಾಕರಿಸಿದ ವಿಶೇಷ ಚೇತನ ಮಗನನ್ನು ತಂದೆಯೇ ಹತ್ಯೆ ಮಾಡಿದ ಘಟನೆ ಶನಿವಾರ ಉತ್ತರ ಕೊಲ್ಕತ್ತಾದಲ್ಲಿ ನಡೆದಿದೆ ಎಂದು ವರದಿ ತಿಳಿಸಿದೆ.
ಹತ್ಯೆಗೈದ ಆರೋಪಿಯನ್ನು ಬನ್ಸಿಧರ್ ಮಲ್ಲಿಕ್ (75) ಎಂದು ಗುರುತಿಸಲಾಗಿದ್ದು, ಆತನ ಮಗ ವಿಕಲಚೇತನ ಮಗ ಶಿರ್ಷೆಂದು ಮಲ್ಲಿಕ್ (45) ಎನ್ನಲಾಗಿದೆ.
ಶನಿವಾರ ಸಂಜೆ ಸುಮಾರು 7 ಗಂಟೆಯ ಸಂದರ್ಭ ಆರೋಪಿ ಶಿರ್ಷೆಂದು ಮಲ್ಲಿಕ್ ಶ್ಯಾಂಪುಕೂರ್ ಪೊಲೀಸ್ ಠಾಣೆಗೆ ತೆರಳಿ ಶರಣಾಗಿದ್ದು, ತನ್ನ ಮಗ ಶಿರ್ಷೆಂದಯ ಮಲ್ಲಿಕ್ನನ್ನು ಸಂಜೆ 5.30ರ ಸುಮಾರಿಗೆ ಕತ್ತು ಹಿಸುಕಿ ಹತ್ಯೆಮಾಡಿರುವುದಾಗಿ ಒಪ್ಪಿಕೊಂಡಿದ್ದಾನೆ ಎಂದು ಕೋಲ್ಕತಾ ಪೊಲೀಸ್ ಉನ್ನತ ಅಧಿಕಾರಿ ತಿಳಿಸಿದ್ದಾರೆ.
ತನಿಖಾ ಅಧಿಕಾರಿಗಳ ಪ್ರಕಾರ, ತನ್ನ ಮಗನೊಂದಿಗೆ ಆರೋಪಿಯು ಉತ್ತಮವಾದ ಸಂಬಂಧವನ್ನು ಹೊಂದಿರಲಿಲ್ಲ. ಅಲ್ಲದೇ ನಿರಂತರವಾಗಿ ಅವರು ಜಗಳವಾಡುತ್ತಿದ್ದರು. ತಂದೆ ಖಾಸಗಿ ಸಂಸ್ಥೆಯೊಂದರ ನಿವೃತ್ತ ಉದ್ಯೋಗಿಯಾಗಿದ್ದು, ಅವನ ಮಗ ನಿರುದ್ಯೋಗಿಯಾಗಿದ್ದರು. ಇದರೊಂದಿಗೆ ಮಗ ಬಾಲ್ಯದಿಂದಲೂ ವಿಕಲಾಂಗತೆಯಿಂದ ಬಳಲುತ್ತಿದ್ದರು ಎಂದು ಹೇಳಿದ್ದಾರೆ.
ಮಾಸ್ಕ್ ಧರಿಸುವ ವಿಚಾರಕ್ಕಾಗಿ ಕಳೆದ ಕೆಲವು ದಿನಗಳಿಂದ ಆಗಾಗೆ ಜಗಳವಾಗುತ್ತಿತತ್ತು. ಮನೆಯಿಂದ ಹೊರಬರುವ ಸಂದರ್ಭ ಮಗನಿಗೆ ತಂದೆ ಮಾಸ್ಕ್ ಧರಿಸುವಂತೆ ಹೇಳುತ್ತಿದ್ದರು. ಆದರೆ, ಮಾಸ್ಕ್ ಧರಿಸಲು ಮಗ ತಿರಸ್ಕರಿಸಿದ್ದು, ಜಗಳ ವಿಕೋಪಕ್ಕೆ ತಿರುಗಿ ಶನಿವಾರ ತಂದೆಯೇ ಮಗನ ಹತ್ಯೆ ಮಾಡಿದ್ದಾರೆ.
ಘಟನೆ ಬಗ್ಗೆ ಸ್ಥಳಿಯ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದ್ದಾರೆ.