ನವದೆಹಲಿ, ಎ.19 (DaijiworldNews/PY) : ಬಹಳಷ್ಟು ಜನರ ಕೈಯಲ್ಲಿ ಹಣವಿಲ್ಲದೆ ಹತಾಶರಾಗಿದ್ದಾರೆ. ಸರತಿ ಸಾಲಿನಲ್ಲಿ ಉಚಿತ ಆಹಾರವನ್ನು ಪಡೆಯಲು ನಿಂತಿರುವುದು ಇದಕ್ಕೆ ಸಾಕ್ಷಿಯಾಗಿದೆ. ಬಡವರಿಗಾಗಿ ಏನನ್ನೂ ಮಾಡದ ಕೇಂದ್ರ ಸರ್ಕಾರ ಹೃದಯಹೀನವಾಗಿದೆ ಎಂದು ಕಾಂಗ್ರೆಸ್ ಹಿರಿಯ ಮುಖಂಡ ಪಿ.ಚಿದಂಬರಂ ಭಾನುವಾರ ಹೇಳಿದ್ದಾರೆ.
ಜನರನ್ನು ಸರ್ಕಾರವು ಹಸಿವಿನಿಂದ ಯಾಕೆ ರಕ್ಷಿಸಲು ಮುಂದಾಗುತ್ತಿಲ್ಲ. ನಗದು ಹಣವನ್ನು ಪ್ರತೀ ಕುಟುಂಬಕ್ಕೆ ವರ್ಗಾಯಿಸುವ ಮೂಲಕ ೪ತನ್ನ ಘನತೆಯನ್ನು ಯಾಕೆ ಕಾಪಾಡಿಕೊಳ್ಳುತ್ತಿಲ್ಲ. ಸರ್ಕಾರವು ೭೭ ಮಿಲಿಯನ್ ಟನ್ ಧಾನ್ಯದಲ್ಲಿ ಸ್ವಲ್ಪ ಭಾಗವನ್ನು ಎಫ್ಸಿಐ ಮೂಲಕ ಹಸಿವಿನಿಂದ ಕಂಗೆಟ್ಟಿರುವ ಕುಟುಂಬಗಳಿಗೆ ಯಾಕೆ ಉಚಿತವಾಗಿ ನೀಡುತ್ತಿಲ್ಲ ಎಂದು ಕೇಂದ್ರ ಸರ್ಕಾರವನ್ನು ಪ್ರಶ್ನಿಸಿದ್ದಾರೆ.
ನಾನು ಕೇಳಿದ ಎರಡು ಪ್ರಶ್ನೆಗಳು ಆರ್ಥಿಕ ಹಾಗೂ ನೈತಿಕ ವಿಷಯಗಳಿಗೆ ಸಂಬಂಧಪಟ್ಟದ್ದಾಗಿವೆ. ನನ್ನ ಪ್ರಶ್ನೆಗಳಿಗೆ ಉತ್ತರಿಸಲು ಪ್ರಧಾನಿ ಮೋದಿ ಅವರು ಹಾಗೂ ವತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು ವಿಫಲರಾಗಿದ್ದಾರೆ. ದೇಶ ಅಸಹಾಯಕವಾಗಿ ನೋಡುತ್ತಿದೆ ಎಂದು ತಿಳಿಸಿದ್ದಾರೆ.