ನವದೆಹಲಿ, ಎ.19 (Daijiworld News/MB) : ಕೊರೊನಾ ಚಿಕಿತ್ಸೆಗಾಗಿ ಬಳಸುವ ಮಲೇರಿಯಾ ಔಷಧ ಹೈಡ್ರೊಕ್ಸಿಕ್ಲೋರೊಕ್ವಿನ್ ಮಾತ್ರೆಗಳನ್ನು ಯುನೈಟೆಡ್ ಅರಬ್ ಎಮಿರೇಟ್ಸ್ಗೆ(ಯುಎಇ) ಪೂರೈಕೆ ಮಾಡಲು ಭಾರತ ನಿರ್ಧರಿಸಿದೆ ಎಂದು ನವದೆಹಲಿಯಲ್ಲಿರುವ ಗಲ್ಫ್ ಅರಬ್ ರಾಜ್ಯಗಳ ರಾಯಭಾರಿ ಕಚೇರಿ ತಿಳಿಸಿರುವುದಾಗಿ ವರದಿಯಾಗಿದೆ.
ಭಾರತವು ಮಲೇರಿಯಾ ಔಷಧ ರಫ್ತಿಗೆ ಈ ಮೊದಲು ನಿಷೇಧ ಹೇರಿದ್ದು ಈ ಔಷಧ ಕೊರೊನಾ ವೈರಸ್ ಸೋಂಕಿತರ ಚಿಕಿತ್ಸೆಗೆ ಉಪಕಾರಿಯಾಗುತ್ತದೆ ಇದನ್ನು ರಫ್ತು ಮಾಡಬೇಕೆಂದು ಹಲವು ದೇಶಗಳು ಮನವಿ ಮಾಡಿದ್ದವು.
ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಈ ಔಷಧ ಪರಿಣಾಮಕಾರಿಯಾಗುವ ಸಾಧ್ಯತೆಯಿದೆ ಎಂದು ಹೇಳಿದ್ದು ಭಾರತ ಸರ್ಕಾರಕ್ಕೆ ಒತ್ತಡ ಹೇರಿದ್ದರು. ಆ ಬಳಿಕ ಭಾರತವೂ ಹಲವು ಔಷಧಗಳ ರಫ್ತಿನ ಮೇಲಿನ ನಿರ್ಬಂಧವನ್ನು ಸಡಿಲಗೊಳಿಸಿತ್ತು.
ಭಾರತವು ಇನ್ನು ಹಲವು ದೇಶಗಳಿಗೆ ಈ ತಿಂಗಳಲ್ಲಿ ಈ ಔಷಧವನ್ನು ರಫ್ತು ಮಾಡಲಿದೆ ಎಂದು ಹೇಳಲಾಗಿದೆ.
5.5 ಮಿಲಿಯನ್ ಮಾತ್ರೆಗಳನ್ನು ಯುಎಇಗೆ ಕೊರೊನಾ ಚಿಕಿತ್ಸೆಗಾಗಿ ಕಳುಹಿಸಿಕೊಡಲಾಗುತ್ತಿದೆ ಎಂದು ರಾಯಭಾರಿ ಕಚೇರಿ ಶನಿವಾರ ತಿಳಿಸಿದೆ.
ಈಗಾಗಲೇ ಅಮೆರಿಕ, ಮಾರಿಷಸ್, ಸೀಶೆಲ್ಸ್ ದೇಶಗಳಿಗೆ ಈ ಮಾತ್ರೆಯನ್ನು ರಫ್ತು ಮಾಡಲಾಗಿದೆ.