ಬೆಂಗಳೂರು, ಎ.19 (DaijiworldNews/PY) : ತುರ್ತು ಪರಿಸ್ಥಿತಿಯಲ್ಲಿ ಕೆಲಸ ಮಾಡುವವರಿಗೆ ಅವಕಾಶ ಕೊಡುವ ನಿಟ್ಟಿನಲ್ಲಿ ಗೊಂದಲ ಆಗಿದೆ. ಸ್ವಲ್ಪ ಕನ್ಫ್ಯೂಸ್ ನಿಂದ ಆಗಿದೆ ಎಂದು ಸಂಸದೆ ಶೋಭಾ ಕರಂದ್ಲಾಜೆ ಹೇಳಿದ್ದಾರೆ.
ಬೆಂಗಳೂರು ಹೊರವಲಯ ಟಿ.ದಾಸರಹಳ್ಳಿಯ ಚೊಕ್ಕಸಂದ್ರ ಹಾಗೂ ಮಲ್ಲಸಂದ್ರ ವಾರ್ಡಿನಲ್ಲಿ ಬಿಎಸ್ವೈ ಕ್ಯಾಂಟೀನ್ಗೆ ಸಂಸದೆ ಶೋಭಾ ಕರಂದ್ಲಾಜೆ ಚಾಲನೆ ನೀಡಿ ಬಳಿಕ ಮಾತನಾಡಿದ ಅವರು, ನಮ್ಮ ಜನರು ಜನರಿಗೆ ಔಷಧಿ ಹಾಗೂ ಊಟ ನೀಡುವ ನಿಟ್ಟಿನಲ್ಲಿ ಮುಂದಾಗಿದ್ದಾರೆ. ಕೊರೊನಾ ರೋಗದಿಂದ ಮುಂದುವರಿದ ಅಮೆರಿಕ, ಫ್ರಾನ್ಸ್, ಜರ್ಮನಿ ಮುಂತಾದ ದೇಶದಲ್ಲಿ ಸಾಕಷ್ಟು ಮಂದಿ ಸಾವನ್ನಪ್ಪಿದ್ದಾರೆ. ನಮ್ಮ ದೇಶದಲ್ಲಿ ಕೊರೊನಾ ನಿಯಂತ್ರಣದಲ್ಲಿದೆ. ನಮ್ಮ ದೇಶಕ್ಕೆ ಕೇವಲ ತಬ್ಲಿಘಿ ಜಮಾತ್ನಿಂದ ಸಮಸ್ಯೆಯಾಗಿದೆ ಎಂದು ಹೇಳಿದರು.
ಲಾಕ್ಡೌನ್ ಬಗ್ಗೆ ಸರ್ಕಾರದ ಗೊಂದಲ ಹೇಳಿಕೆ ವಿಚಾರವಾಗಿ ಮಾತನಾಡಿದ ಅವರು, ತುರ್ತು ಪರಿಸ್ಥಿತಿಯಲ್ಲಿ ಕೆಲಸ ಮಾಡುವವರಿಗೆ ಅವಕಾಶ ನೀಡಿವ ಸಲುವಾಗಿ ಗೊಂದಲವಾಗಿದೆ. ಸ್ವಲ್ಪ ಕನ್ಫ್ಯೂಸ್ ಆಗಿದೆ. ಮಾಸ್ಕ್ ಎಲ್ಲರೂ ಧರಿಸಬೇಕು. ಸುಮ್ಮನೆ ಮನೆಯಿಂದ ಹೊರಗೆ ಬರಬಾರದು. ಲಾಕ್ಡೌನ್ ಉಲ್ಲಂಘಿಸಿದರೆ ಪೊಲೀಸರು ಕಠಿಣ ಕ್ರಮ ತೆಗದುಕೊಳ್ಳತ್ತಾರೆ ಎಂದರು.
ಈ ಸಂದರ್ಭ ಸ್ವತಃ ತಾವೇ ಹಸಿದ ಕೂಲಿ ಕಾರ್ಮಿಕರಿಗೆ ಊಟ ವಿತರಿಸಿದರು.