ಕಾಸರಗೋಡು, ಏ 19(DaijiworldNews/SM): ಹಾಟ್ ಸ್ಪಾಟ್ ಪ್ರದೇಶಗಳನ್ನು ಹೊರತುಪಡಿಸಿ ಕೇರಳದಲ್ಲಿ ಏಪ್ರಿಲ್ 20ರಿಂದ ಲಾಕ್ ಡೌನ್ ನಿಯಮ ಸಡಿಲಿಸಲು ಸರಕಾರ ತೀರ್ಮಾನ ತೆಗೆದುಕೊಂಡಿದೆ. ಆದರೆ ರೆಡ್ ಝೋನ್ ನಲ್ಲಿರುವ ಕಾಸರಗೋಡು ಜಿಲ್ಲೆಗೆ ಯಾವುದೇ ವಿನಾಯಿತಿ ನೀಡಿಲ್ಲ.
ಸೋಂಕು ಪ್ರದೇಶಗಳನ್ನು ನಾಲ್ಕು ವಲಯಗಳನ್ನಾಗಿ ವಿಭಿಜಿಸಲಾಗಿದೆ. ರೆಡ್, ಆರೆಂಜ್ -ಎ, ಆರೆಂಜ್- ಬಿ ಮತ್ತು ಗ್ರೀನ್ ಎಂದು ವಿಂಗಡಿಸಲಾಗಿದೆ. ಆರಂಜ್ ಬಿ ಮತ್ತು ಗ್ರೀನ್ ವಲಯಗಳಲ್ಲಿ ಸೋಮವಾರದಿಂದ ಲಾಕ್ ಡೌನ್ ಭಾಗಶಃ ತೆರವಾಗಲಿದೆ. ಕಾಸರಗೋಡು, ಕಣ್ಣೂರು, ಕೋಝಿಕ್ಕೋಡ್, ಮಲಪ್ಪುರಂ ಜಿಲ್ಲೆಗಳು ರೆಡ್ ಝೋನ್ ನಲ್ಲಿದೆ. ಮೇ ಮೂರರ ತನಕ ಈ ಜಿಲ್ಲೆಗಳಲ್ಲಿ ಅಗತ್ಯ ಸೇವೆ ಹೊರತು ಪಡಿಸಿ ಉಳಿದಂತೆ ಲಾಕ್ ಡೌನ್ ಮುಂದುವರಿಯಲಿದೆ.
ಎರ್ನಾಕುಲಂ , ಪತ್ತನಂತ್ತಿಟ್ಟ , ಕೊಲ್ಲಂ ಜಿಲ್ಲೆ ಆರೆಂಜ್ ಎ ಝೋನ್ ನಲ್ಲಿದ್ದು , ಏಪ್ರಿಲ್ 24 ರ ತನಕ ಲಾಕ್ ಡೌನ್ ಮುಂದುವರಿಯಲಿದೆ. ಆಲಪ್ಪುಯ , ತ್ರಿಶೂರು , ಪಾಲಕ್ಕಾಡ್ , ತಿರುವನಂತಪುರ ಮತ್ತು ವಯನಾಡು ಜಿಲ್ಲೆ ಆರೆಂಜ್ ಬಿ ನಲ್ಲಿದ್ದು , ಭಾಗಶ ಲಾಕ್ ಡೌನ್ ತೆರವಾಗಲಿದೆ. ಗ್ರೀನ್ ಝೋನ್ ನಲ್ಲಿರುವ ಕೋಟ್ಟಯಂ ಮತ್ತು ಇಡುಕ್ಕಿ ಜಿಲ್ಲೆ ಗಳಲ್ಲಿ ಲಾಕ್ ಡೌನ್ ನಿಯಮಗಳು ಬಹುತೇಕ ತೆರವಾಗಲಿದೆ.
ವಿವಾಹ , ಧಾರ್ಮಿಕ , ಉತ್ಸವ ಇನ್ನಿತರ ಸಾಮೂಹಿಕ ಕಾರ್ಯಕ್ರಮ , ಶೈಕ್ಷಣಿಕ ಸಂಸ್ಥೆಗಳು ತೆರೆಯುವಂತಿಲ್ಲ. ಜಿಲ್ಲೆಯಿಂದ ಹೊರ ಜಿಲ್ಲೆಗೆ ತೆರಳಲು ಅನುಮತಿ ಇಲ್ಲ. ಶನಿವಾರ ಮತ್ತು ಭಾನುವಾರ ಗಳಂದು ಕ್ಷೌರ ದಂಗಡಿ ಕಾರ್ಯಾಚರಿಸಲಿದೆ. ಹೋಟೆಲ್ , ರೆಸ್ಟೋರೆಂಟ್ ಗಳು ಬೆಳಿಗ್ಗೆ ಏಳರಿಂದ ಸಂಜೆ ಏಳರ ತನಕ ಕಾರ್ಯಾಚರಿಸಲು ಅನುಮತಿ ನೀಡಲಾಗಿದೆ. ಕೃಷಿ ಚಟುವಟಿಕೆ ಮತ್ತು ಕೃಷಿ ಕಾರ್ಮಿಕರಿಗೆ ವಿನಾಯಿತಿ ನೀಡಲಾಗಿದೆ. ರೆಡ್ ಝೋನ್ ಹೊರತು ಪಡಿಸಿ ಉಳಿದಂತೆ ನ್ಯಾಯಾಲಯಗಳು ತೆರೆದು ಕಾರ್ಯಾಚರಿಸಲಿದೆ.