ಬೆಂಗಳೂರು, ಎ.20 (DaijiworldNews/PY) : ಗಲಭೆಕೋರರ ವಿರುದ್ಧ ಕ್ರಮಕ್ಕೆ ಉತ್ತರಪ್ರದೇಶ ಮಾದರಿ ಅನುಸರಿಸಬೇಕು. ಅಥವಾ ಅದಕ್ಕಿಂತಲೂ ಒಂದು ಹೆಜ್ಜೆ ಮುಂದೆ ಹೋಗಿ ಕೈಗೊಳ್ಳಬೇಕು. ಪಾದರಾಯನಪುರದ ಗಲಭೆಕೋರರ ಆಸ್ತಿ ಜಪ್ತಿ ಮಾಡಬೇಕು. ಅಲ್ಲದೆ, ಆಗಿರುವ ನಷ್ಟವನ್ನು ಅವರಿಂದಲೇ ವಸೂಲಿ ಮಾಡಬೇಕು ಎಂದು ಪ್ರವಾಸೋದ್ಯಮ ಸಚಿವ ಸಿ.ಟಿ ರವಿ ಹೇಳಿದ್ದಾರೆ.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪಾದರಾಯನಪುರದ ಗಲಭೆಕೋರರ ಹಿಂದೆ ಯಾರೇ ಇದ್ದರೂ ಅವರ ವಿರುದ್ದ ಕ್ರಮ ಕೈಗೊಳ್ಳಬೇಕು. ಕೇಂದ್ರಿಯ ಪಡೆಯನ್ನಾದರೂ ಕರೆಸಿ ಕಠಿಣ ಕ್ರಮ ಕೈಗೊಳ್ಳಬೇಕು. ಅಲ್ಲದೇ, ಗಲಭೆಕೋರರ ಆಸ್ತಿ ಜಪ್ತಿ ಮಾಡಬೇಕು. ಆಗಿರುವ ನಷ್ಟವನ್ನು ಅವರಿಂದಲೇ ವಸೂಲು ಮಾಡಬೇಕು ಎಂದು ತಿಳಿಸಿದರು.
ಇಷ್ಟೆ ಮಾತ್ರವಲ್ಲದೇ, ದುಷ್ಕರ್ಮಿಗಳಿಗೆ ಪ್ರಚೋದನೆ ನೀಡದವರ ವಿರುದ್ದವೂ ಕಠಿಣ ಕ್ರಮಕೈಗೊಳ್ಳಬೇಕು. ಗಲಭೆಕೋರರ ಮೇಲೆ ಯಾವುದೇ ರೀತಿಯಾದ ಕನಿಕರ ತೋರಿಸಬೇಕಾಗಿಲ್ಲ. ಅದಕ್ಕೆ ಬದಲಾಗಿ ಕಠಿಣ ಕ್ರಮ ತೆಗದುಕೊಳ್ಳಬೇಕು ಎಂದರು.
ಈ ಘಟನೆಯ ಹಿಂದೆ ಯಾರ ಪ್ರಚೋದನೆ ಇದೆಯಾ ಎಂಬ ಅನುಮಾನಗಳು ಕಾಡುತ್ತಿವೆ. ದೇಶದಲ್ಲಿ ಶೇ.೩೦ರಷ್ಟು ಸೋಂಕು ತಬ್ಲಿಘಿಗಳಿಂದಲೇ ಅಂಟಿದೆ. ತಬ್ಲಿಘಿ ಹಾಗೂ ನಂಜನಗೂಡು ವ್ಯಕ್ತಿಯಿಂದಲೇ ಸೋಂಕು ಹೆಚ್ಚಾಗಿದೆ ಎಂದು ಹೇಳಿದರು.
ಉತ್ತರಪ್ರದೇಶದಲ್ಲಿ ಅನುಸರಿಸಿದ ಮಾದರಿಯಂತೆ ಗಲಭೆಕೋರರ ವಿರುದ್ದ ಕ್ರಮಕೈಗೊಳ್ಳಬೇಕು. ಅಥವಾ ಆ ಮಾದರಿಗಿಂತ ಒಂದು ಹೆಜ್ಜೆ ಮುಂದಿಟ್ಟು ಕ್ರಮಕೈಗೊಳ್ಳಬೇಕು. ಗಲಭೆಯ ಹಿಂದೆ ಯಾರೇ ಇದ್ದರೂ ಅವರ ವಿರುದ್ದ ಕ್ರಮ ತೆಗೆದುಕೊಳ್ಳಬೇಕು. ಪ್ರಕರಣದ ಹಿಂದೆ ಜಮೀರ್ ಅಹಮದ್ ಇದ್ದರೂ ಅವರ ವಿರುದ್ದ ಕ್ರಮ ಕೈಗೊಳ್ಳಬೇಕು ಎಂದು ತಿಳಿಸಿದರು.
ಲಾಕ್ಡೌನ್ನಿಂದ ಪ್ರತೀ ದಿನ 1,500-1,700 ಕೋಟಿ ನಷ್ಟವಾಗುತ್ತಿದೆ. ಸಿಎಂ ಅವರು ಸಂಯಮದಿಂದ ವರ್ತಿಸುತ್ತಿರುವುದು ದೌರ್ಬಲ್ಯ ಎಂದು ಭಾವಿಸದಂತಿದೆ. ಇದಕ್ಕೆಲ್ಲ ಯಾವುದರ ಮೂಲಕ ಉತ್ತರ ಕೊಡಬೇಕೋ ಹಾಗೆ ಕೊಡಬೇಕು. ಸಿಎಂ ಅವರ ಸಂಯಮದ, ಉದಾರತೆಯ ಮಾತನ್ನು ಪುಂಡಾಟಕ್ಕೆ ಲೈಸೆನ್ಸ್ ಎಂದುಕೊಂಡಿದ್ದಾರೆ. ರಾಜ್ಯದ ಪೊಲೀಸರಿಗೆ ಸಾಮರ್ಥ್ಯವಿದೆ. ಇಲ್ಲದೇ ಇದ್ದರೆ ಸಿಆರ್ಪಿಎಫ್ ಕರೆಸಿ ಪರಿಸ್ಥಿತಿಯನ್ನು ಸರಿಪಡಿಸಿ ಎಂದರು.