ತಿರುವನಂತಪುರ, ಎ.20 (DaijiworldNews/PY) : ಕೇಂದ್ರ ಗೃಹ ಸಚಿವಾಲಯದ ಆಕ್ಷೆಪದ ಹಿನ್ನೆಲೆ ಕೊರೊನಾ ಹಾಟ್ಸ್ಪಾಟ್ಗಳನ್ನು ಹೊರತುಪಡಿಸಿ ಇತರ ಪ್ರದೇಶಗಳನ್ನು ಸಡಿಲಿಕೆ ಮಾಡುವ ತೀರ್ಮಾನದಿಂದ ಕೇರಳ ಸರ್ಕಾರ ಹಿಂದೆ ಸರಿದಿದೆ.
ಈ ಬಗ್ಗೆ ಪ್ರತಿಕ್ರಿಯಿಸಿರುವ ರಾಜ್ಯ ಸರ್ಕಾರ, ಸಂವಹಮದ ಕೊರತೆಯಿಂದಾಗಿ ಹೀಗಾಗಿಗೆ ಎಂದು ತಿಳಿಸಿದೆ. ಈ ಹಿಂದೆ, ಲಾಕ್ಡೌನ್ ಸಡಿಲಿಕೆಯ ಬಗೆಗಿ ತೀರ್ಮಾನವನ್ನು ಸಮರ್ಥಿಸಿಕೊಂಡಿತ್ತು. ಅಲ್ಲದೇ, ಲಾಕ್ಡೌನ್ ಸಡಿಲಿಸುವ ವಿಚಾರದ ಬಗ್ಗೆ ಕೇಂದ್ರ ಸರ್ಕಾರಕ್ಕೆ ಮಾಹಿತಿ ನೀಡಿಯೇ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ ಎಂದಿತ್ತು.
ಕೇಂದ್ರ ಗೃಹ ಸಚಿವಾಲಯವು ಲಾಕ್ಡೌನ್ ಸಡಿಲಿಸುವ ಕೇರಳದ ತೀರ್ಮಾನಕ್ಕೆ ಸೋಮವಾರ ಬೆಳಗ್ಗೆ ಆಕ್ಷೇಪಿಸಿತ್ತು. ಈ ಬಗ್ಗೆ ಕೇರಳ ಸರ್ಕಾರಕ್ಕೆ ಪತ್ರ ಬರೆದಿದ್ದ ಗೃಹ ಸಚಿವಾಲಯ, ಕೇಂದ್ರ ಸರ್ಕಾರ ನಿಗದಿಪಡಿಸಿರುವ ಮಾರ್ಗಸೂಚಿಗೆ ಅನುಗುಣವಾಗಿ ನಡೆದುಕೊಳ್ಳಬೇಕೆಂದು ತಿಳಿಸಿತ್ತು.
ಲಾಕ್ರ್ಡನ್ ಸಡಿಲಿಕೆಗೊಳಿಸಿ ಕೇರಳ ಸರ್ಕಾರ ಹೊರಡಿಸಿದ್ದ ಪರಿಷ್ಕೃತ ಮಾರ್ಗಸೂಚಿಯು ಎ.೧೫ರಂದು ಕೇಂದ್ರ ಸರ್ಕಾರ ಹೊರಡಿಸಿದ್ದ ಮಾರ್ಗಸೂಚಿಯಲಲ್ಲಿ ನಿರ್ಬಂಧಿಸಲಾಗಿದ್ದ ಚಟುವಟಿಕೆಗಳಿಗೆ ಅನುವು ಮಾಡಿಕೊಟ್ಟಿದೆ ಎಂದು ಗೃಹ ಸಚಿವಾಲಯ ಅಸಮಾಧಾನಗೊಂಡಿತ್ತು.
ಕೊರೊನಾ ಹಾಟ್ಸ್ಪಾಟ್ಗಳಲ್ಲದ ವಯನಾಡ್, ಆಲಪ್ಪುಳ, ತ್ರಿಶೂರ್, ಪಾಲಕ್ಕಾಡ್, ತಿರುವನಂತಪುರ ಜಿಲ್ಲೆಗಳಲ್ಲಿ ಭಾಗಶಃ ಲಾಕ್ಡೌನ್ ತೆರವು ಮತ್ತು ಕೊಟ್ಟಾಯಂ, ಇಡುಕ್ಕಿಯಲ್ಲಿ ಎ.20ರಿಂದ ಲಾಕ್ಡೌನ್ ಬಹುತೇಕ ತೆರವುಗಳಿಸುವ ವಿಚಾರವಾಗಿ ಎ.17ರಂದು ಕೇರಳ ಸರ್ಕಾರ ಮಾರ್ಗಸೂಚಿಯನ್ನು ಬಿಡುಗಡೆಗೊಳಿಸಿತ್ತು. ಈ ಮಾರ್ಗಸೂಚಿಯ ಪ್ರಕಾರ, ರೆಸ್ಟೋರೆಂಟ್, ಹೊಟೇಲ್, ಪುರಸಭೆ ವ್ಯಾಪ್ತಿಯಲ್ಲಿನ ಬಸ್ ಸಂಚಾರ, ವಾಹನ ಸಂಚಾರ, ಕ್ಷೌರದಂಗಡಿ, ಪುಸ್ತಕದಂಗಡಿ, ಕಟ್ಟಡ ಕಾರ್ಮಿಕರಿಗೆ ಲಾಕ್ಡೌನ್ನಿಂದ ವಿನಾಯಿತಿ ಇದೆ ಎಂದು ತಿಳಿಸಿತ್ತು.