ನವದೆಹಲಿ, ಎ.21 (Daijiworld News/MB) : ದೇಶದಾದ್ಯಂತ ಹರಡುತ್ತಲ್ಲೇ ಇರುವ ಕೊರೊನಾ ವೈರಸ್ ಸೋಂಕು ಇದೀಗ ರಾಷ್ಟ್ರಪತಿ ಭವನದ ಸಿಬ್ಬಂದಿಯಲ್ಲೂ ಕಂಡು ಬಂದಿದ್ದು 125 ಕುಟುಂಬಗಳನ್ನು ಕ್ವಾರಂಟೈನ್ಗೆ ಒಳಪಡಿಸಲಾಗಿದೆ.
ಸೋಂಕು ದೃಢಪಟ್ಟ ಮಹಿಳೆಯು ರಾಷ್ಟ್ರಪತಿ ಭವನದ ಶುಚಿತ್ವ ಕೆಲಸ ಮಾಡುತ್ತಿದ್ದು ಇತ್ತೀಚೆಗೆ ಈ ವ್ಯಕ್ತಿಯ ಕುಟುಂಬದ ಮಹಿಳೆಯೋರ್ವರು ಕೊರೊನಾ ಸೋಂಕಿನಿಂದಾಗಿ ಮೃತಪಟ್ಟಿದ್ದರು. ಈ ಕಾರಣದಿಂದಾಗಿ ಕುಟುಂಬವನ್ನೇ ಕ್ವಾರಂಟೈನ್ನಲ್ಲಿ ಇರಿಸಲಾಗಿದ್ದು ಕೊರೊನಾ ವೈರಸ್ ಪರೀಕ್ಷೆಯಲ್ಲಿ ನೆಗೆಟಿವ್ ವರದಿ ಬಂದಿದೆ.
ಕೊರೊನಾ ದೃಢಪಟ್ಟ ಮಹಿಳೆಯ ನೆರೆಹೊರೆಯ 30 ಮನೆಗಳನ್ನು ಕ್ವಾರಂಟೈನ್ಗೆ ಒಳಪಡಿಸಲಾಗಿದ್ದು ಸರ್ಕಾರವೇ ಆಹಾರ ಪೂರೈಕೆ ಮಾಡುತ್ತಿದೆ ಎಂದು ವರದಿ ತಿಳಿಸಿದೆ.