ಬೆಂಗಳೂರು, ಏ 21 (Daijiworld News/MSP): "ಹಿರಿಯ ನಾಗರಿಕರನ್ನು ರಕ್ಷಿಸಬೇಕಾದ ಹಾಗೂ ಉಳಿಸಿಕೊಳ್ಳಬೇಕಾದ ಜವಾಬ್ದಾರಿ ಸರ್ಕಾರ ಹಾಗೂ ಸಮಾಜದ ಮೇಲಿದೆ. ರಾಜ್ಯದಲ್ಲಿ ಕೊರೊನಾಗೆ ಮೃತಪಟ್ಟವರು 55 ರಿಂದ 80 ವರ್ಷದೊಳಗಿನವರಾಗಿದ್ದು ಹೀಗಾಗಿ ಮುಂಜಾಗ್ರತಾ ಕ್ರಮವಾಗಿ 55 ವರ್ಷ ಮೇಲ್ಪಟ್ಟ ಎಲ್ಲರನ್ನೂ ಕಡ್ದಾಯ ಕೊರೊನಾ ಟೆಸ್ಟ್ ಗೆ ಒಳಪಡಿಸಲು ನಿರ್ಧರಿಸಲಾಗಿದೆ" ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ಹೇಳಿದ್ದಾರೆ.
ಹಿರಿಯ ನಾಗರಿಕರು ಹೆಚ್ಚು ಮುಂಜಾಗ್ರತೆ ವಹಿಸುವುದು ಸೂಕ್ತ, ಮನೆಯಲ್ಲೂ ಎಲ್ಲರಿಂದ ಅಂತರ ಕಾಯ್ದುಕೊಂಡರೆ ಉತ್ತಮ, ್ಮಧುಮೇಹ, ರಕ್ತದೊತ್ತಡ, ಶ್ವಾಸಕೋಸ, ಹೃದಯ ಸಂಬಂಧಿತ ಸಮಸ್ಯೆಗಳಿಂದ ಹೆಚ್ಚಾಗಿ ಹಿರಿಯರು ಬಳಲುತ್ತಿರುತ್ತಾರೆ.
ಹೀಗಾಗಿ ತಮ್ಮ ಅರೋಗ್ಯದಲ್ಲಿ ಸಣ್ಣ ವ್ಯತ್ಯಾಸವಾದರೂ ಕೊರೊನಾ ಪರೀಕ್ಷೆ ಮಾಡಿಸಿಕೊಳ್ಳಲು ನಿಗದಿತ ಆಸ್ಪತ್ರೆಗೆ ಬರುವುದು ಉತ್ತಮ. ಈವರೆಗೆ ಮೃತಪಟ್ಟ ಹೆಚ್ಚಿನವರು ಕೊನೆಯ ಹಂತದಲ್ಲಿ ಆಸ್ಪತ್ರೆಗೆ ಬಂದವರಾಗಿದ್ದಾರೆ. ಹಿರಿಯ ನಾಗರಿಕರನ್ನು ಕಾಯಿಲೆಗಳಿಂದ ಬಳಲುತ್ತಿರುವವರನ್ನು ರಕ್ಷಿಸುವ ಹೊಣೆ ಎಲ್ಲರ ಮೇಲಿದೆ , ಅದ್ದರಿಂದ 55 ವರ್ಷ ಮೇಲ್ಪಟ್ಟವರು ಕಡ್ದಾಯವಾಗಿ ಕೊರೊನಾ ಪರೀಕ್ಷೆಗೆ ಒಳಪಡುವುದು ಸೂಕ್ತ ಎಂದರು.