ರಾಮನಗರ, ಏ 21 (Daijiworld News/MSP): ಖಾಸಗಿ ಚಾನೆಲ್ ಒಂದರ ರಾಮನಗರದ ಜಿಲ್ಲೆಯ ವರದಿಗಾರೊಬ್ಬರಿಗೆ ಹಿಂದಿನಿಂದ ಬಂದ ಎಟಿಎಂಗೆ ಹಣ ತುಂಬುವ ವಾಹನ ಡಿಕ್ಕಿ ಹೊಡೆದು ಸಾವನ್ನಪ್ಪಿದ ದಾರುಣ ಘಟನೆ ನಡೆದಿದೆ.
ಮೃತರನ್ನು ಪತ್ರಕರ್ತ ಹನುಮಂತು ಎಂದು ಗುರುತಿಸಲಾಗಿದೆ. ಇವರು ಪಾದರಾಯನಪುರ ಗಲಭೆಯ ಆರೋಪಿಗಳನ್ನ ರಾಮನಗರದ ಕಾರಾಗೃಹಕ್ಕೆ ಕರೆತಂದಿದ್ದ ವರದಿಯನ್ನು ಮಾಡಿ ಹಿಂತಿರುಗುತ್ತಿದ್ದಾಗ ರಾಮನಗರದ ಕಾರಾಗೃಹದ ಬಳಿ ಈ ಘಟನೆ ನಡೆದಿದೆ.
ಹನುಮಂತು ಅವರು ಕಳೆದ 6 ವರ್ಷಗಳಿಂದಲೂ ರಾಮನಗರ ವದಿಗಾರರಾಗಿ ಕಾರ್ಯನಿರ್ವಹಿಸುತ್ತಿದ್ದರು. ಇವರು ಮೂರು ವರ್ಷಗಳ ಹಿಂದಷ್ಟೆ ವಿವಾಹವಾಗಿದ್ದರು. ಮೃತರು ಪತ್ನಿ ಒಂದು ವರ್ಷದ ಒಂದು ಮಗುವನ್ನು ಅಗಲಿದ್ದಾರೆ.
ಹನುಮಂತು ಅವರ ನಿಧನಕ್ಕೆ ರಾಮನಗರ ಜಿಲ್ಲಾ ಪತ್ರಕರ್ತ ಸಹೋದ್ಯೋಗಿಗಳು ಕಂಬನಿ ಮಿಡಿದಿದ್ದಾರೆ.