ಮೈಸೂರು, ಎ.21 (Daijiworld News/MB) : ಹಲವು ಕಡೆಗಳಲ್ಲಿ ಆಶಾ ಕಾರ್ಯಕರ್ತೆಯರ ಮೇಲೆ ಹಲ್ಲೆ, ಬೆದರಿಕೆ ನಡೆಯುತ್ತಲ್ಲೇ ಇದ್ದು ಮೈಸೂರಿನಲ್ಲಿ ಆಶಾ ಕಾರ್ಯಕರ್ತೆಯೋರ್ವರಿಗೆ ಬೆದರಿಕೆ ಹಾಕಲಾಗಿದೆ ಎಂದು ಆರೋಪಿಸಲಾಗಿದ್ದು ಮೂವರು ಆರೋಪಿಗಳನ್ನು ಪೊಲೀಸರು ಬಂಧನ ಮಾಡಿದ್ದಾರೆ.
ಬಂಧಿತರನ್ನು ಮೆಹಬೂಬ್, ಖಲೀಲ್, ಜೀಸನ್ ಎಂದು ಗುರುತಿಸಲಾಗಿದೆ.
ಸುಮಯಾ ಫಿರ್ದೋಸ್ ಎಂಬ ಬನ್ನಿಮಂಟಪದ ಸರ್ಕಾರಿ ಆಸ್ಪತ್ರೆಯ ಆಶಾ ಕಾರ್ಯಕರ್ತೆ ಅವರು ಸೋಂಕು ಲಕ್ಷಣಗಳ ಕುರಿತಾಗಿ ಸರ್ವೇ ನಡೆಸುತ್ತಿದ್ದಾಗ ಈ ಮೂವರಲ್ಲಿ ಮಾಸ್ಕ್ ಹಾಕಿಕೊಂಡು ಸಾಮಾಜಿಕ ಅಂತರ ಕಾಯ್ದುಕೊಳ್ಳಿ ಎಂದು ಹೇಳಿದ್ದು ಆ ಸಂದರ್ಭದಲ್ಲಿ ಈ ಮೂವರು ಸುಮಯಾ ಫಿರ್ದೋಸ್ ಅವರಿಗೆ ಅವಾಚ್ಯ ಶಬ್ದಗಳಿಂದ ನಿಂದನೆ ಮಾಡಿ ಬೆದರಿಕೆ ಹಾಕಿದ್ದಾರೆ ಎಂದು ಆರೋಪಿಸಿ ಆಶಾ ಕಾರ್ಯಕರ್ತೆ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ದೂರಿನನ್ವಯ ಮೂವರನ್ನು ಪೊಲೀಸರು ಬಂಧಿಸಿದ್ದು ಆರೋಪಿಗಳಿಂದ ಹೇಳಿಕೆ ಪಡೆದಿದ್ದಾರೆ. ಈ ಕುರಿತಾಗಿ ಎನ್ ಆರ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.