ಜಮ್ಮು-ಕಾಶ್ಮೀರ, ಎ.22 (DaijiworldNews/PY) : ಶೋಪಿಯಾನ್ ಜಿಲ್ಲೆಯಲ್ಲಿ ಅಡಗಿ ಕುಳಿತಿರುವ ಎರಡು ಉಗ್ರರನ್ನು ಖಚಿತ ಮಾಹಿತಿ ಮೇರೆಗೆ ಪೊಲೀಸರು ಹಾಗೂ ಸಿಆರ್ಪಿಎಫ್ ಪಡೆಗಳು ನಡೆಸಿದ ಜಂಟಿ ಕಾರ್ಯಾಚರಣೆಯಲ್ಲಿ ಹೊಡೆದುರುಳಿಸಲಾಗಿದೆ ಎಂದು ವರದಿ ತಿಳಿಸಿದೆ.
ಜೈನ್ ಪೋರಾ ಗ್ರಾಮದ ಮೆಲ್ಹೋರಾದಲ್ಲಿ ಮಂಗಳವಾರ ಭದ್ರತಾ ಪಡೆಗಳಿಂದ ಉಗ್ರರ ದಮನಕ್ಕಾಗಿ ಜಂಟಿ ಕಾರ್ಯಚರಣೆ ನಡೆಸಲಾಗುತ್ತಿದ್ದು, ಎರಡು ಉಗ್ರರನ್ನು ಬುಧವಾರ ಹೊಡೆದುರುಳಿಸಲಾಗಿದೆ. ಇನ್ನು ಎರಡು ಉಗ್ರರು ಅಡಗಿ ಕುಳಿತ್ತಿದ್ದು ಕಾರ್ಯಾಚರಣೆ ಮುಂದುವರೆದಿದೆ ಎಂದು ವರದಿ ತಿಳಿಸಿದೆ.
ಕೊರೊನಾ ಆತಂಕದ ಮಧ್ಯೆ ಜಮ್ಮು-ಕಾಶ್ಮೀರದಲ್ಲಿ ಕಳೆದೆರಡು ವಾರಗಳಿಂದ ಉಗ್ರರ ಕಾಟ ಹೆಚ್ಚಾಗಿದ್ದು, ಭಾರತೀಯ ಸೇನಾ ಪಡೆ ಕಾರ್ಯಾಚರಣೆ ನಡೆಸುತ್ತಿದೆ.