ನವದೆಹಲಿ, ಏ 22 (Daijiworld News/MSP): ಸಾಮಾಜಿಕ ಜಾಲತಾಣದ ದಿಗ್ಗಜ ಎಂದೆಣಿಸಿಕೊಂಡಿರುವ ಫೇಸ್ ಬುಕ್ ಸಂಸ್ಥೆಯೂ ಮುಖೇಶ್ ಅಂಬಾನಿ ಒಡೆತನದ ಕಂಪನಿಯಾದ ರಿಲಯನ್ಸ್ ಜಿಯೋದಲ್ಲಿ ಹೂಡಿಕೆ ಮಾಡಲು ಮುಂದೆ ಬಂದಿದೆ.
ರಿಲಯನ್ಸ್ ಇಂಡಸ್ಟ್ರೀಸ್ ಗ್ರೂಪ್ ಕಂಪನಿ ಜಿಯೋ ಪ್ಲಾಟ್ಫಾರ್ಮ್ಸ್ ಲಿಮಿಟೆಡ್ನಲ್ಲಿ ಶೇ .9.99 ರಷ್ಟು ಪಾಲನ್ನು ಖರೀದಿಸಲು ಅಮೆರಿಕದ ಹಿರಿಯ ಕಂಪನಿ ಫೇಸ್ಬುಕ್ ಒಪ್ಪಂದ ಮಾಡಿಕೊಂಡಿದೆ ಎಂಬ ಮಾಹಿತಿಯನ್ನು ಕಂಪನಿಗಳು ಬುಧವಾರ ಪ್ರಕಟಿಸಿವೆ.
ಸಾಮಾಜಿಕ ಜಾಲತಾಣದಲ್ಲಿ ಬಹುದೊಡ್ಡ ಮಾಧ್ಯಮವಾಗಿರುವ ಫೇಸ್ ಬುಕ್ ಸಂಸ್ಥೆ , ಈ ಮೂಲಕ ತೆಲಿಕಾಂ ಕ್ಷೇತ್ರಕ್ಕೂ ಲಗ್ಗೆ ಇಟ್ಟಿದೆ
ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್ ಜಿಯೋ ಪ್ಲಾಟ್ಫಾರ್ಮ್ಸ್ ಲಿಮಿಟೆಡ್ (ಜಿಯೋ ಪ್ಲಾಟ್ಫಾರ್ಮ್ಸ್) ಮತ್ತು ಫೇಸ್ಬುಕ್ ಜಿಯೋ ಪ್ಲಾಟ್ಫಾರ್ಮ್ಗಳಲ್ಲಿ ಫೇಸ್ಬುಕ್ 43574 ಕೋಟಿ ರೂ. ಈ ಒಪ್ಪಂದದಲ್ಲಿ, ಜಿಯೋ ಪ್ಲಾಟ್ಫಾರ್ಮ್ಗಳ ಮೌಲ್ಯವನ್ನು 4.62 ಲಕ್ಷ ಕೋಟಿ ರೂ. ($ 65.95 ಬಿಲಿಯನ್) ಎಂದು ಅಂದಾಜಿಸಲಾಗಿದೆ. ಈ ರೀತಿಯಾಗಿ ಜಿಯೋ ಪ್ಲಾಟ್ಫಾರ್ಮ್ಗಳಲ್ಲಿ ಫೇಸ್ಬುಕ್ನ ಪಾಲು ಶೇ 9.99 ಆಗಲಿದೆ.
ಇನ್ನು, ಈ ಬಗ್ಗೆ ಹೇಳಿಕೆ ನೀಡಿರುವ ಫೇಸ್ಬುಕ್ ಸಂಸ್ಥೆ, ಭಾರತದ ಆರ್ಥಿಕ ಬೆಳವಣಿಗೆ ಮತ್ತು ಜನರ ಆರ್ಥಿಕ ಉತ್ತೇಜನ ನೀಡುವುದರ ಜೊತೆಗೆ ಹೊಸ ಹೊಸ ಪ್ರಯತ್ನಗಳಿಗೆ ಇದು ಸಹಕಾರವಾಗಲಿದೆ ಎಂದು ಹೇಳಿದೆ.