ನವದೆಹಲಿ, ಏ 22 (Daijiworld News/MSP): ಕೊರೊನಾ ಸೋಂಕನ್ನು ಹದ್ದುಬಸ್ತಿಗೆ ತರಲು ಶ್ರಮಿಸುತ್ತಿರುವ ಭಾರತದಲ್ಲಿ ಮೇ 3ರ ನಂತರ ನಂತರವೂ ಲಾಕ್ ಡೌನ್ ಮುಂದುವರಿಯುವ ಸಾಧ್ಯತೆ ಇದೆ.
ಇನ್ನು ಈ ಕುರಿತು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಕೊರೊನಾ ನ್ಯಾಷನಲ್ ಟಾಸ್ಕ್ ಫೋರ್ಸ್ ವರದಿ ಸಲ್ಲಿಕೆ ಮಾಡಿದ್ದು, ಮೇ 3ರ ಬಳಿಕವೂ ಲಾಕ್ ಡೌನ್ ಮುಂದುವರೆಸಿ ಎಂದು ಸಲಹೆ ನೀಡಿದೆ ಎನ್ನಲಾಗಿದೆ. ಹಾಟ್ ಸ್ಪಾಟ್ ಗಳಲ್ಲಿ ಲಾಕ್ ಡೌನ್ ಅನಿವಾರ್ಯವೆಂದು ರಾಜನಾಥ್ ಸಿಂಗ್, ಮೋದಿಗೆ ನೀಡಿದ ವರದಿಯಲ್ಲಿ ಹೇಳಿದ್ದಾರೆ.
ಈ ನಡುವೆ ಅಮೆರಿಕ, ಸ್ಪೇನ್, ಇಟಲಿ, ಫ್ರಾನ್ಸ್, ರಷ್ಯಾ ಸೇರಿದಂತೆ ಮುಂದುವರಿದ ರಾಷ್ಟ್ರಗಳು ಕೊರೊನಾ ಹತೋಟಿಗೆ ತರಲು ಲಾಕ್ಡೌನ್ ಅನ್ನು ಮೇ ಅಂತ್ಯದವರೆಗೆ ಮುಂದುವರಿಸಿದೆ. ಇನ್ನು ಕೆಲವೂ ರಾಷ್ಟ್ರಗಳಲ್ಲಿ ಲಾಕ್ ಡೌನ್ ಜೂನ್ವರೆಗೂ ಮುಂದುವರಿಸಲಾಗಿದೆ. ಈ ನಡುವೆ ಭಾರತಕ್ಕೆ ವಿಶ್ವ ಆರೋಗ್ಯ ಸಂಸ್ಥೆ ಲಾಕ್ಡೌನ್ ಹಿಂಪಡೆಯುವುದು ಬೇಡ ಎಂಬ ಸೂಚನೆ ನೀಡಿದೆ.
ಕೊರೊನಾ ನ್ಯಾಷನಲ್ ಟಾಸ್ಕ್ ಫೋರ್ಸ್ ನೀಡಿದ ವರದಿಯಲ್ಲೂ , ಭಾರತದಲ್ಲಿ ಸದ್ಯದ ಪರಿಸ್ಥಿತಿಯಲ್ಲಿ ಲಾಕ್ ಡೌನ್ ಮುಂದುವರಿಕೆ ಅನಿವಾರ್ಯವೆಂದು ವರದಿಯಲ್ಲಿ ಹೇಳಲಾಗಿದ್ದು ಮೇ 15ರವರೆಗೆ ಲಾಕ್ ಡೌನ್ ಮುಂದುವರೆಸುವಂತೆ ಅಭಿಪ್ರಾಯ ಮಂಡಿಸಿದೆ.