ಬೆಂಗಳೂರು, ಎ.22 (DaijiworldNews/PY) : ಅಕ್ಕಿಯಿಂದ ಸ್ಯಾನಿಟೈಸರ್ ತಯಾರಿಕೆ ಮಾಡುವುದು ಸರಿಯಲ್ಲ. ಸ್ಯಾನಿಟೈಸರ್ ತಯಾರಿಸಲು ಅದರದ್ದೇ ಆದ ಕಚ್ಚಾವಸ್ತುಗಳಿವೆ ಎಂದು ಮಾಜಿ ಮುಖ್ಯಮಂತ್ರಿ, ವಿಧಾನಸಭೆಯ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಹೇಳಿದ್ದಾರೆ.
ಈ ವಿಚಾರವಾಗಿ ಮಾತನಾಡಿದ ಅವರು, ಅಕ್ಕಿಯಿಂದ ಸ್ಯಾನಿಟೈಸರ್ ತಯಾರಿ ಮಾಡುವುದು ಸರಿ ಅಲ್ಲ. ಆ ಅಕ್ಕಿಯನ್ನು ಬಡವರಿಗೆ ನೀಡಿದರೆ ಅವರು ಹೊಟ್ಟೆ ತುಂಬಿಸಿಕೊಳ್ಳುತ್ತಾರೆ. ಸ್ಯಾನಿಟೈಸರ್ ತಯಾರಿಕೆ ಮಾಡಲು ಅದರದ್ದೇ ಆದ ಕಚ್ಚಾವಸ್ತುಗಳಿವೆ. ಒಂದು ವೇಳೆ ಅಕ್ಕಿಯ ಹೊರತು ಬೇರೆ ವಸ್ತುಗಳಿಂದ ಸ್ಯಾನಿಟೈಸರ್ ತಯಾರಿಕೆ ಮಾಡಲು ಸಾಧ್ಯವಿಲ್ಲ ಎಂದರೆ ಅಕ್ಕಿಯಿಂದ ತಯಾರಿಸಲಿ ಎಂದು ತಿಳಿಸಿದರು.
ದೇಶದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿರುವ ಹಿನ್ನೆಲೆ ಭಾರತೀಯ ಆಹಾರ ನಿಗಮ ಬಳಿ ಹೆಚ್ಚುವರಿಯಾಗಿ ಉಳಿದಿರುವ ಅಕ್ಕಿಯನ್ನು ಬಳಸಿಕೊಂಡು ಹ್ಯಾಂಡ್ ಸ್ಯಾನಿಟೈಸರ್ ಉತ್ಪಾದಿಸಲು ಕೇಂದ್ರ ಸರ್ಕಾರವು ನಿರ್ಧರಿಸಿದೆ.