ತಿರುವನಂತಪುರ, ಎ.22 (DaijiworldNews/PY) : ಮಹಾಮಾರಿ ಕೊರೊನಾದ ಭೀತಿಗೆ ಒಳಗಾಗಿರುವ ಕೇರಳ ರಾಜ್ಯ ಸರ್ಕಾರಿ ನೌಕರರ ಒಂದು ತಿಂಗಳ ವೇತನವನ್ನು ಐದು ಕಂತುಗಳಲ್ಲಿ ಕಡಿತಗೊಳಿಸಲು ತೀರ್ಮಾನಿಸಿದೆ.
ನಿರ್ದಿಷ್ಟ ಅವಧಿಯ ಬಳಿಕ ಕಡಿತಗೊಳಿಸಿರುವ ಒಂದು ತಿಂಗಳ ಸಂಬಳವನ್ನು ಸರ್ಕಾರಿ ನೌಕರರಿಗೆ ಮರುಪಾವತಿ ಮಾಡಲಾಗುತ್ತದೆ. ಎಲ್ಲಾ ವಿಭಾಗದ ಸರ್ಕಾರಿ ನೌಕರರ ಆರು ದಿನಗಳ ವೇತನವನ್ನು ಐದು ತಿಂಗಳಲ್ಲಿ ಕಡಿತಗೊಳಿಸುವ ಪ್ರಸ್ತಾವನೆಯನ್ನು ಹಣಕಾಸು ಇಲಾಖೆಗೆ ಸಲ್ಲಿಸಲಾಗಿದೆ.
ಈ ಹಣವನ್ನು ವಿವಿಧ ಹಂತಗಳಲ್ಲಿ ಪುನಃ ನೀಡಲಾಗುವುದು, ಬುಧವಾರ ನಡೆಯುವ ಸಂಪುಟ ಸಭೆಯಲ್ಲಿ ಈ ಪ್ರಸ್ತಾವನೆ ಅನುಮೋದನೆಗೊಳ್ಳಲಿದ್ದು, ಸಿಎಂ ಅಧಿಕೃತವಾಗಿ ಘೋಷಿಸುವ ಸಾಧ್ಯತೆಯಿದೆ.