ದೆಹಲಿ, ಏ 23 (Daijiworld News/MSP): ದೇಶದೆಲ್ಲೆಡೆ ಕೊರೊನಾ ವೈರಸ್ ಹರಡದಂತೆ ತಡೆಯಲು ಲಾಕ್ಡೌನ್ ಹೇರಲಾಗಿದೆ. ಕೆಲಸಕ್ಕೆ ಹೋಗುವವರು, ವಿದ್ಯಾರ್ಥಿಗಳು ಸೇರಿದಂತೆ ಬಹುತೇಕ ಎಲ್ಲರೂ ಹೊರಗೆ ಹೋಗಲಾಗದೆ ಮನೆಯಲ್ಲೆ ಕಾಲ ಕಳೆಯುತ್ತಿದ್ದಾರೆ. ಈ ನಡುವೆ ಬಹಳಷ್ಟು ಜನ ಮನೆಯಲ್ಲೇ ಬಟ್ಟೆಯಿಂದ ಹೊಲಿದು ಮಾಸ್ಕ್ ತಯಾರಿಸುತ್ತಿದ್ದಾರೆ.
ಇನ್ನೊಂದೆಡೆ ಕೊರೊನಾ ಬಾರದಂತೆ ಹಾಗೂ ಹರಡದಂತೆ ಜನರು ಮನೆಯಿಂದ ಹೊರಬರುವಾಗ ಮುಂಜಾಗ್ರತಾ ಕ್ರಮವಾಗಿ ಕಡ್ಡಾಯವಾಗಿ ಮಾಸ್ಕ್ ಧರಿಸಬೇಕು ಎಂದು ಆರೋಗ್ಯ ಇಲಾಖೆ ಸೂಚಿಸಿದೆ. ಹೀಗಾಗಿ ಮಾಸ್ಕ್ ಕೊರತೆ ಸಹಜವಾಗಿ ಕಾಡುತ್ತಿದೆ.
ಅನೇಕ ಸಾರ್ವಜನಿಕರು ಮಾಸ್ಕ್ ತಯಾರಿಸಿ ನೀಡುತ್ತಿರುವಾ ದೇಶದ ಮೊದಲ ಮಹಿಳೆ, ರಾಷ್ಟ್ರಪತಿ ರಾಮನಾಥ್ ಕೋವಿಂದ್ರ ಪತ್ನಿ ಸವಿತಾ ಕೋವಿಂದ್ ಕೂಡಾ ತಮ್ಮದೇ ಆದ ರೀತಿಯಲ್ಲಿ ಅಳಿಲು ಸೇವೆ ಸಲ್ಲಿಸುತ್ತಿದ್ದಾರೆ. ಲಾಕ್ ಡೌನ್ ಸಮಯದಲ್ಲಿ ಮನೆಯಲ್ಲಿ ತಾವೇ ಬಟ್ಟೆಯ ಮಾಸ್ಕ್ ಗಳನ್ನು ಹೊಲಿದು ತಯಾರಿಸಿದ್ದಾರೆ.
ಸವಿತಾ ಕೋವಿಂದ್ ಅವರು ರಾಷ್ಟ್ರಪತಿ ಎಸ್ಟೇಟ್ ಶಕ್ತಿ ಹಾತ್ನಲ್ಲಿ ಬಟ್ಟೆಯ ಮಾಸ್ಕ್ನ್ನ ತಯಾರಿಸುತ್ತಿದ್ದು ಅವರು ಹೊಲೆದ ಮುಖ ಗವಸುಗಳನ್ನು ದೆಹಲಿ ನಗರ ಆಶ್ರಯ ಸುಧಾರಣಾ ಮಂಡಳಿಯ ವಿವಿಧ ಆಶ್ರಯ ಮನೆಗಳಿಗೆ ವಿತರಿಸಲಾಗುತ್ತದೆ.