ಬೆಂಗಳೂರು, ಎ.23 (Daijiworld News/MB) : ದೇಶದಾದ್ಯಂತ ಕೊರೊನಾ ಪ್ರಕರಣಗಳು ಹೆಚ್ಚುತ್ತಲ್ಲೇ ಇದ್ದು ಕಳೆದ 24 ಗಂಟೆಗಳಲ್ಲಿ 1,409 ಜನರಿಗೆ ಕೊರೊನಾ ಸೋಂಕು ತಗುಲಿದ್ದು 41 ಮಂದಿ ಮೃತಪಟ್ಟಿದ್ದಾರೆ. ಒಟ್ಟು ಕೊರೊನಾ ಪ್ರಕರಣಗಳು 21,393ಕ್ಕೆ ಏರಿಕೆಯಾಗಿದ್ದುಈ ಪೈಕಿ 4,257 ಮಂದಿ ಗುಣಮುಖರಾಗಿದ್ದಾರೆ. ಈ ಸೋಂಕಿಗೆ ಈವರೆಗೆ 681 ಮಂದಿ ಬಲಿಯಾಗಿದ್ದಾರೆ.
ದೇಶದಲ್ಲೇ ಅಧಿಕ ಕೊರೊನಾ ಪ್ರಕರಣಗಳು ದಾಖಲಾಗಿರುವ ಮಹಾರಾಷ್ಟ್ರದಲ್ಲಿ ಒಟ್ಟು 5,652 ಜನರಿಗೆ ಸೋಂಕು ಪತ್ತೆಯಾಗಿದ್ದು 269 ಮಂದಿ ಸಾವನ್ನಪ್ಪಿದ್ದಾರೆ. 789 ಜನರು ಗುಣಮುಖರಾಗಿದ್ದಾರೆ. ಕರ್ನಾಟಕದಲ್ಲಿ ಒಟ್ಟು 427 ಸೋಂಕು ಪ್ರಕರಣಗಳು ದಾಖಲಾಗಿದ್ದು 17 ಮಂದಿ ಸಾವನ್ನಪ್ಪಿದ್ದಾರೆ. 131 ಮಂದಿ ಗುಣಮುಖರಾಗಿದ್ದಾರೆ.
ದೆಹಲಿಯಲ್ಲಿ 2,248 ಪ್ರಕರಣಗಳು, ತಮಿಳುನಾಡಿನಲ್ಲಿ 1,629 ಪ್ರಕರಣಗಳು, ರಾಜಸ್ಥಾನದಲ್ಲಿ 1,890 ಪ್ರಕರಣಗಳು, ಮಧ್ಯಪ್ರದೇಶದಲ್ಲಿ 1,592, ಆಂಧ್ರ ಪ್ರದೇಶದಲ್ಲಿ 813 ಪ್ರಕರಣ, ತೆಲಂಗಾಣದಲ್ಲಿ 945 ಪ್ರಕರಣಗಳು, ಉತ್ತರ ಪ್ರದೇಶದಲ್ಲಿ 1449, ಗುಜರಾತ್ 2407, ಕೇರಳ 438 ಪ್ರಕರಣಗಳು ದಾಖಲಾಗಿದೆ.