ಜಾರ್ಖಂಡ್, ಎ.23 (DaijiworldNews/PY) : ದೇಶಾದ್ಯಂತ ಲಾಕ್ಡೌನ್ ಜಾರಿಯಲ್ಲಿದೆ. ಈ ನಡುವೆ ಗಿರ್ಡಿಹ್ ಮೂಲದ ದಂಪತಿ ತಮ್ಮ ಮಗುವಿಗೆ ಲಾಕ್ಡೌನ್ ಎಂದು ನಾಮಕರಣ ಮಾಡಿದ್ದಾರೆ.
ಸಿಹೋಡಿಹ್ ನಿವಾಸಿ ಅನುರಾಧ(30) ತನ್ನ ಮೊದಲ ಮಗುವಿಗೆ ಚೈತದಿಹ್ನ ಖಾಸಿ ಆಸ್ಪತ್ರೆಯಲ್ಲಿ ಶನಿವಾರ ಜನ್ಮ ನೀಡಿದ್ದಾರೆ.
ಈ ಬಗ್ಗೆ ಮಾತನಾಡಿ ಅನುರಾಧ, ಲಾಕ್ಡೌನ್ ಸಂದರ್ಭ ಈ ಹೆಸರು ಸೂಕ್ತವೆಂದು ನಾನು ಭಾವಿಸಿದ್ದು, ಈ ಹೆಸರಿನ ಬಗ್ಗೆ ಪ್ರಸ್ತಾಪಿಸಿದ್ದಾಗ ನನ್ನ ಪತಿ ಹಾಗೂ ಅವರ ಕುಟುಂಬದವರು ಕೂಡಾ ಒಪ್ಪಿಗೆ ಸೂಚಿಸಿದರು. ಅಲ್ಲದೇ ಕುಟುಂಬದ ಹಿರಿಯರೂ ಆಕ್ಷೇಪಿಸಿಲ್ಲ. ಅಲ್ಲದೇ ಎಲ್ಲರೂ ಮಗುವನ್ನು ಲಾಕ್ಡೌನ್ ಎಂದು ಕರೆಯುತ್ತಿದ್ದಾರೆ. ನನ್ನ ಪತಿ ಪಿಂಕು ವರ್ಮಾ ಕೂಡಾ ಈ ಹೆಸರು ಚೆನ್ನಾಗಿದೆ ಎಂದಿದ್ದಾರೆ ಎಂದು ತಿಳಿಸಿದರು.
ಮಗುವಿಗೆ ಲಾಕ್ಡೌನ್ ಎಂದು ಹೆಸರಿಟ್ಟ ಕಾರಣ ಮುಂದೆಯೂ ಲಾಕ್ಡೌನ್ ಬಗ್ಗೆ ನೆನಪಿಟ್ಟುಕೊಳ್ಳು ಸಹಾಯವಾಗಿದೆ. ಕೊರೊನಾ ನೆಗೆಟಿವ್ ಸುದ್ದಿಯ ನಡುವೆಯೂ ನಮ್ಮ ಮಗು ಜನನವಾಗಿದ್ದು ಸಂತೋಷದ ವಿಷಯವಾಗಿದೆ. ಹಾಗಾಗಿ ನಾವು ಮಗುವಿಗೆ ಲಾಕ್ಡೌನ್ ಎಂದು ಹೆಸರಿಟ್ಟಿದ್ದೇವೆ. ಕೊರೊನಾ ವೈರಸ್ ಭೀತಿಯ ನಡುವೆಯೂ ಈ ಸುದ್ದಿ ನಮಗೆ ಖುಷಿ ತಂದಿದೆ ಎಂದು ಅನುರಾಧ ಪತ್ನಿ ಪಿಂಕು ಶರ್ಮಾ ಹೇಳಿದ್ದಾರೆ.