ಉತ್ತರಾಖಂಡ್, ಏ 24(Daijiworld News/MSP): ಕೊರೊನಾ ನಿಯಂತ್ರಣಕ್ಕಾಗಿ ದೇಶದಲ್ಲಿ ವಿಧಿಸಲಾಗಿರುವ ಲಾಕ್’ಡೌನ್ ನಿಯಮ ಉಲ್ಲಂಘಿಸಿದ ಕಾರಣಕ್ಕಾಗಿ ಒಟ್ಟು 51 ಮಂದಿ ವಿರುದ್ಧ ಉತ್ತರ ಕಾಶಿ ಪೊಲೀಸರು ಕೇಸ್ ದಾಖಲಿಸಿದ್ದಾರೆ. ವಿಶೇಷ ಎಂದರೆ ಆರು ತಿಂಗಳ ಶಿಶು ಮತ್ತು ಮೂರು ವರ್ಷದ ಮಗುವನ್ನು ಸೇರಿಸಿ ಪ್ರಕರಣ ದಾಖಲಿಸಿದ್ದಾರೆ.
ದೇಶಾದ್ಯಂತ ಲಾಕ್ ಡೌನ್ ಜಾರಿಯಲ್ಲಿದ್ದು, ಕಾರಣ ನಿಗಧಿತ ಅವಧಿಯಲ್ಲಿ ಅಗತ್ಯ ವಸ್ತುಗಳ ಕೊಳ್ಳಲು ಹೊರತುಪಡಿಸಿ ಜನ ಹೊರಗೆ ಬರದಂತೆ, ಗುಂಪು ಸೇರದಂತೆ ನಿರ್ಬಂಧ ವಿಧಿಸಲಾಗಿದೆ
ಆದರೆ ಉತ್ತರ ಕಾಶಿಯಲ್ಲಿ ಜನರು ಗುಂಪು ಗುಂಪಾಗಿ ಓಡಾಟ ನಡೆಸಿದ ಕಾರಣದಿಂದಾಗಿ ಒಂದು ಕುಟುಂಬ ಸೇರಿದಂತೆ ಸುಮಾರು 51 ಮಂದಿ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.
ಇದರಲ್ಲಿ ಆರು ತಿಂಗಳ ಮಗು ಹಾಗೂ ಮೂರು ವರ್ಷದ ಪುಟಾಣಿ ಹಾಗೂ 8 ವರ್ಷದ ಬಾಲಕ ಎಂದು ಬರೆಯಲಾಗಿದೆ. ಈ ಪ್ರಕರಣ ಮಕ್ಕಳಿಗೂ ಅನ್ವಯವಾಗುತ್ತದೆ ಎಂದು ಹೇಳಲಾಗಿದೆ. ಆದರೆ ಅಧಿಕಾರಿಗಳು ಬಾಲಪರಾಧ ಕಾಯ್ದೆ ಪ್ರಕಾರ ಮಕ್ಕಳ ವಿರುದ್ಧ ಪ್ರಕರಣ ದಾಖಲಿಸಿಲ್ಲ, ತನಿಖೆ ಮಾತ್ರ ನಡೆದಿದೆ ಎಂದು ಹೇಳಿದ್ದಾರೆ.