ನವದೆಹಲಿ, ಏ 24(Daijiworld News/MSP): ಪಾಲ್ಘರ್ ಘಟನೆ ಸಂಬಂಧ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ವಿರುದ್ಧ ಆರೋಪ ಮಾಡಿದ್ದ ಕಾರಣಕ್ಕಾಗಿ ಹಿರಿಯ ಪತ್ರಕರ್ತ ಅರ್ನಾಬ್ ಗೋಸ್ವಾಮಿ ವಿರುದ್ಧ ದಾಖಲಾದ ಎಫ್ಐಆರ್ಗಳಿಗೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ಅರ್ನಾಬ್ ಅವರನ್ನು ಬಂಧಿಸದಂತೆ ಮೂರು ವಾರಗಳ ಕಾಲ ತಡೆ ನೀಡಿದೆ.
ಸುಪ್ರೀಂ ಅವರ ಈ ತಡೆಯಿಂದ ಅರ್ನಬ್ ಅವರೈಗೆ ಮೂರು ವಾರಗಳ ಕಾಲ ರಿಲೀಫ್ ಸಿಕ್ಕಂತಾಗಿದೆ. ಎಫ್ಐಆರ್ಗಳ ಆಧಾರದ ಮೇಲೆ ತನ್ನ ವಿರುದ್ಧ ಕೈಗೊಳ್ಳಬಹುದಾದ ಯಾವುದೇ ಕ್ರಮವನ್ನು ತಡೆಹಿಡಿಯಬೇಕೆಂದು ಅರ್ನಬ್ ಸುಪ್ರೀಂಗೆ ಮನವಿ ಸಲ್ಲಿಸಿದ್ದರು. ಈ ಕುರಿತು ನ್ಯಾಯಮೂರ್ತಿಗಳಾದ ಡಿ.ವೈ.ಚಂದ್ರಚೂಡ್ ಮತ್ತು ಎಂ.ಆರ್.ಶಾ ಅವರ ನ್ಯಾಯಪೀಠವು ವಿಡಿಯೋ ಕಾನ್ಫರೆನ್ಸಿಂಗ್ ಮೂಲಕ ವಿಚಾರಣೆ ನಡೆಸಿ ಅರ್ನಬ್ ಬಂಧಿಸಿದಂತೆ ಮೂರು ವಾರಗಳ ಕಾಲ ತಡೆ ನೀಡಿದೆ.
ನಾಗ್ಪುರದಲ್ಲಿ ದಾಖಲಾದ ಪ್ರಾಥಮಿಕ ಪ್ರಕರಣವನ್ನು ಹೊರತುಪಡಿಸಿ ಎಲ್ಲಾ ಎಫ್ಐಆರ್ಗಳ ವಿಚಾರಣೆಗೆ ಮುಂದಿನ ಆದೇಶದವರೆಗೆ ತಡೆಹಿಡಿಯುವಂತೆ ನ್ಯಾಯಾಲಯ ನಿರ್ದೇಶಿಸಿದೆ. ಈ ನಡುವೆ ನಾಗ್ಪುರದಲ್ಲಿ ದಾಖಲಾದ ಎಫ್ಐಆರ್ ಅನ್ನು ನ್ಯಾಯಾಲಯವೂ ಇಂದು ಮುಂಬೈಗೆ ವರ್ಗಾಯಿಸಿದೆ.